ಅಂಗನವಾಡಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದ ಧಾರವಾಡ ಡಿಸಿ, ಸಿಇಒ

khushihost
ಅಂಗನವಾಡಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದ ಧಾರವಾಡ ಡಿಸಿ, ಸಿಇಒ

ಧಾರವಾಡ, 12 : ಧಾರವಾಡ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಬುಧವಾರ ಧಾರವಾಡ ನಗರದ ಮದಿಹಾಳದ ಅಂಗನವಾಡಿ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳ ಹಾಜರಾತಿ, ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ, ಆಹಾರ ವಿತರಣೆ ಕುರಿತು ಪರಿಶೀಲಿಸಿದರು.

ನಂತರ ಅಂಗನವಾಡಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದರು.

ಈ ಸಂದರ್ಭದಲ್ಲಿ ಧಾರವಾಡ ತಹಶೀಲ್ದಾರ ಡಾ.ಡಿ.ಎಚ್. ಹೂಗಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕಿ ಡಾ.ಎಚ್.ಎಚ್‌.ಕುಕನೂರ, ಯೋಜನಾ ಅಧಿಕಾರಿ ಡಾ.ಕಮಲಾ ಬೈಲೂರ ಇತರರು ಇದ್ದರು.

Share This Article