ಪ್ರವಾದಿ ಮಹಮ್ಮದರ ನಿಂದನೆ : ಶಾಸಕ ರಾಜಾ ಸಿಂಗ್ ಮತ್ತೆ ಬಂಧನ 

khushihost
ಪ್ರವಾದಿ ಮಹಮ್ಮದರ ನಿಂದನೆ : ಶಾಸಕ ರಾಜಾ ಸಿಂಗ್ ಮತ್ತೆ ಬಂಧನ 

ಹೈದರಾಬಾದ, ೨೫- : ಪ್ರವಾದಿ ಮಹಮ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದಿಂದ ಅಮಾನತ್ತುಗೊಂಡಿರುವ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಮತ್ತೆ ಬಂಧಿಸಲಾಗಿದೆ.

ಪ್ರವಾದಿ ಮಹಮ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರಣ ಬಿಜೆಪಿಯಿಂದ ಟಿ ರಾಜಾ ಸಿಂಗ್ ಅಮಾನತುಗೊಳಿಸಲಾಗಿತ್ತು. ಆ ಬಳಿಕ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇದೀಗ ಇಂದು ಮತ್ತೆ ತೆಲಂಗಾಣ ಪೊಲೀಸರು ಹೈದರಾಬಾದ್ ನ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.

ಆಗಸ್ಟ್ 23 ರಂದು ನಾಯಕನ ವಿರುದ್ಧ ಅವರ ಹೇಳಿಕೆಯ ವಿರುದ್ಧ ರಾಜ್ಯದಲ್ಲಿ ಭಾರಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತಗೊಳಿಸಲಾಗಿತ್ತು.

Share This Article