ಎಸಿಪಿ ಬರಮನಿ ಸೇರಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ

khushihost
ಎಸಿಪಿ ಬರಮನಿ ಸೇರಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ಬೆಳಗಾವಿಯ ಕ್ರೈಂ ವಿಭಾಗದ ಎಸಿಪಿ ನಾರಾಯಣ ಬರಮನಿ, ಬಿ.ಆರ್.ಗಡ್ಡೇಕರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಎಸಿಪಿ ನಾರಾಯಣ ಬರಮನಿ ಅವರನ್ನು ಮಾರ್ಕೆಟ್ ಎಸಿಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಸದಾಶಿವ ಕಟ್ಟಿಮನಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇನ್ನು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದ ಬಿ.ಆರ್.ಗಡ್ಡೇಕರ್ ಅವರನ್ನು ಸಿಇಎನ್ ಪೊಲೀಸ್ ಠಾಣೆಗೆ ವಾಪಸ್ ನೇಮಿಸಲಾಗಿದೆ.

ಉದ್ಯಮಬಾಗ್ ಇನ್ ಸ್ಪೆಕ್ಟರ್ ಧೀರಜ್ ಶಿಂಧೆ ಅವರನ್ನು ಡಿಸಿಇಆರ್ ಗೆ ವರ್ಗಾವಣೆ ಮಾಡಲಾಗಿದೆ. ಶಹಾಪುರ ಠಾಣೆಯಿಂದ ವಿನಾಯಕ ಬಡಿಗೇರ ಅವರನ್ನು ಸಂಚಾರ ದಕ್ಷಿಣ ಠಾಣೆಗೆ ವರ್ಗಾಯಿಸಲಾಗಿದೆ.

ಡಿಎಸ್ ಬಿಯಿಂದ ಸುದರ್ಶನ ಪಟ್ಟಣಕುಡೆ ಅವರನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದೆ. ಸುನೀಲ್ ಕುಮಾರ ಅವರನ್ನು ಎಸಿಬಿಯಿಂದ ಬೆಳಗಾವಿ ಶಹಾಪುರ ಠಾಣೆಗೆ ವರ್ಗಾಯಿಸಲಾಗಿದೆ.

ರಾಮಣ್ಣ ಬಿರಾದಾರ ಅವರನ್ನು ಐಎಸ್ ಡಿಯಿಂದ ಉದ್ಯಮಬಾಗ್ ಠಾಣೆಗೆ ವರ್ಗಾಯಿಸಲಾಗಿದೆ. ಮಂಜುನಾಥ ನಾಯಕ ಅವರನ್ನು ದಕ್ಷಿಣ ಸಂಚಾರ ಠಾಣೆಯಿಂದ ಐಎಸ್ ಡಿಗೆ ವರ್ಗಾವಣೆ ಮಾಡಲಾಗಿದೆ.

Share This Article