ಹಲಗಾದಲ್ಲಿ ಬೈಕ್ ಮೇಲೆ ಹೊರಟವನ ರುಂಡ ಚೆಂಡಾಡಿ ಪರಾರಿ!

khushihost
ಹಲಗಾದಲ್ಲಿ ಬೈಕ್ ಮೇಲೆ ಹೊರಟವನ ರುಂಡ ಚೆಂಡಾಡಿ ಪರಾರಿ!

ಬೆಳಗಾವಿ : ಶುಕ್ರವಾರ ಮಧ್ಯಾಹ್ನ ವ್ಯಕ್ತಿಯೊಬ್ಬನ ರುಂಡವನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.

ದ್ವಿಚಕ್ರ ವಾಹನಗಳ ಮೇಲೆ ಬಂದಿದ್ದ ದುಷ್ಕರ್ಮಿಗಳು ಸವಾರನ ಎಡಬದಿಗೆ ಬಂದು ವಾಹನ ಚಲಿಸುತ್ತಿರುವಾಗಲೇ ಹರಿತವಾದ ಆಯುಧದಿಂದ ಕುತ್ತಿಗೆಯ ಮೇಲೆ ಬಿಸಿ ರುಂಡ ದೇಹದಿಂದ ಬೇರ್ಪಡಿಸಿ ವೇಗವಾಗಿ ಪರಾರಿಯಾದರು.

ಭೀಕರವಾಗಿ ಕೊಲೆಯಾದವರನ್ನು ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಗದಗಯ್ಯ ಹಿರೇಮಠ ಎನ್ನಲಾಗುತ್ತಿದೆ. ಬೈಕ್ ಮೇಲೇ ಬಿದ್ದಿದ್ದ ಅವರ ಮೃತ ದೇಹ ನೋಡಿ ಗ್ರಾಮಸ್ಥರು ಮತ್ತು ಆ ಮಾರ್ಗದಿಂದ ಸಂಚರಿಸುವರು ಅಘಾತಗೊಂಡಿದ್ದಾರೆ.

ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಸ್ಥಳಕ್ಕೆ ಸಿಪಿಐ ವಿಜಯ‌ಕುಮಾರ ಶಿನ್ನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article