ಮುರುಘಾ ಶೀಗಳ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಇಂದು ಬಾಲಕಿಯರಿಗೆ ಮೆಡಿಕಲ್ ಟೆಸ್ಟ್ 

khushihost
ಮುರುಘಾ ಶೀಗಳ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಇಂದು ಬಾಲಕಿಯರಿಗೆ ಮೆಡಿಕಲ್ ಟೆಸ್ಟ್ 

ಚಿತ್ರದುರ್ಗ: ಇಲ್ಲಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ದ ಕೇಳಿ ಬಂದಿರುವ ಲೈಂಗಿಕ ಆರೋಪ ವಿಚಾರವಾಗಿ ಸಂತ್ರಸ್ಥ ಬಾಲಕಿಯರಿಗೆ ಇಂದು ವೈದ್ಯಕೀಯ ತಪಾಸಣೆ‌ ನಡೆಸಲಾಗುತ್ತದೆ ಎನ್ನಲಾಗಿದೆ.

ಚಿತ್ರದುರ್ಗದ ಜಿಲ್ಲಾ ಎಸ್‌ಪಿಯವರ ಆದೇಶ ಅನ್ವಯ ತನಿಖೆಯನ್ನು ಪೋಲಿಸ್‌ ಅಧಿಕಾರಿಗಳು ನಡೆಸಲು ಮುಂದಾಗಿದ್ದು, ಇಂದು ವೈದ್ಯಕೀಯ ಪರೀಕ್ಷೆಗೆ ಬಾಲಕಿಯರನ್ನು ಒಳಪಡಿಸುವ ಸಾಧ್ಯತೆ ಎನ್ನಲಾಗಿದೆ.

ಈ ವೇಳೆ ಮುರುಘಾ ಶ್ರೀಗಳನ್ನು ಕೂಡ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗುತ್ತದೆ ಎನ್ನಲಾಗಿದ್ದು, ಒಂದು ವೇಳೆ ಆರೋಪದಲ್ಲಿ ಸತ್ಯಾಂಶ ಕಂಡು ಬಂದರೆ ಶ್ರೀಗಳನ್ನು ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಬಹುದು ಎನ್ನಲಾಗಿದೆ.

ಸದ್ಯ ಸಂತ್ರಸ್ಥ ಬಾಲಕಿಯರು ಒಡನಾಡಿ ಪುನರ್ ವಸತಿ ಕೇಂದ್ರದಲ್ಲಿದ್ದು, ಇಂದು ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್‌ ನಡೆಸಲಾಗುತ್ತದೆ.

Share This Article