ಏಕಾಏಕಿ ತುಂಬಿ ಹರಿದ ಹಳ್ಳ : ಒಬ್ಬ ನಾಪತ್ತೆ, 20ಕ್ಕೂ ಹೆಚ್ಚು ಜನರ ರಕ್ಷಣೆ 

khushihost
ಏಕಾಏಕಿ ತುಂಬಿ ಹರಿದ ಹಳ್ಳ : ಒಬ್ಬ ನಾಪತ್ತೆ, 20ಕ್ಕೂ ಹೆಚ್ಚು ಜನರ ರಕ್ಷಣೆ 

ಹುಬ್ಬಳ್ಳಿ: ನಗರದ ಬೆಣ್ಣೆ ಹಳ್ಳ ಏಕಾಏಕಿ ತುಂಬಿ ಹರಿದಿದ್ದು, ಹಳ್ಳದ ಮಧ್ಯೆ ಸಿಲುಕಿಕೊಂಡಿದ್ದ 25ಕ್ಕೂ ಹೆಚ್ಚು ಜನರು ರಕ್ಷಣೆ ಮಾಡಿದ ಘಟನೆ ಹುಬ್ಬಳ್ಳಿಯ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿರಂತರ ಮಳೆಯಿಂದ ಬೆಣ್ಣೆ ಹಳ್ಳದ ಹರಿವು ಏಕಾಏಕಿ ಹೆಚ್ಚಾಗಿದ್ದು, 25ಕ್ಕೂ ಹೆಚ್ಚು ಜನರು ಹಳ್ಳದ ಮಧ್ಯ ಸಿಲುಕಿಕೊಂಡಿದ್ದರು.

ಕೂಡಲೇ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಇನ್ಸೆಪೆಕ್ಟರ್​ ರಮೇಶ​ ಗೋಕಾಕ​ ಹಾಗೂ ತಹಶೀಲ್ದಾರ​ ಪ್ರಕಾಶ​ ನಾಶಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, 20 ಕ್ಕೂ ಹೆಚ್ಚು ಜನರ ರಕ್ಷಣೆ ಕಾರ್ಯಾಚರಣೆ ನಡೆಸಿದ್ದಾರೆ.

ಓರ್ವ ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ.

Share This Article