ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ನರಸಂಹಾರದ ಎಲ್ಲಾ ಪ್ರಕರಣ ರದ್ದುಗೊಳಿಸಿದ ಸುಪ್ರೀಮ ಕೋರ್ಟ 

khushihost
ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ನರಸಂಹಾರದ ಎಲ್ಲಾ ಪ್ರಕರಣ ರದ್ದುಗೊಳಿಸಿದ ಸುಪ್ರೀಮ ಕೋರ್ಟ 

ನವದೆಹಲಿ: ಬಾಬ್ರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಹಾಗೂ 2002 ರ ಗುಜರಾತ್ ನರಸಂಹಾರದ ಎಲ್ಲ ಪ್ರಕರಣಗಳನ್ನು  ಸುಪ್ರೀಮ ಕೋರ್ಟ ಮುಕ್ತಾಯಗೊಳಿಸಿದೆ.

1992ರಲ್ಲಿ ಬಾಬರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಉತ್ತರ ಪ್ರದೇಶ ಸರ್ಕಾರ ಮತ್ತು ಅದರ ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಗಳಿಗೆಲ್ಲ ಸುಪ್ರೀಮ ಕೋರ್ಟ ತೆರೆ ಎಳೆದಿದೆ.

2002ರಲ್ಲಿ ಗೋಧ್ರಾ ರೈಲಿನ ಬೆಂಕಿ ಪ್ರಕರಣದ ನಂತರ ಗುಜರಾತ್ ರಾಜ್ಯದೆಲ್ಲೆಡೆ ನಡೆದ ನರಸಂಹಾರ ಕುರಿತು  ಆರಂಭಿಸಲಾದ ಎಲ್ಲ ಪ್ರಕ್ರಿಯೆಗಳನ್ನು ಸುಪ್ರೀಮ ಕೋರ್ಟ ಮುಕ್ತಾಯಗೊಳಿಸಿದೆ.

ಸಮಯ ಕಳೆದಂತೆ ಮತ್ತು 2019 ರ ಅಯೋಧ್ಯೆ ಭೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಮ ಕೋರ್ಟ ನೀಡಿದ ತೀರ್ಪನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಂಗ ನಿಂದನೆ ಪ್ರಕರಣಗಳು ಉಳಿಯುವುದಿಲ್ಲ ಎಂದು ಸುಪ್ರೀಮ ಕೋರ್ಟ ಹೇಳಿದೆ.

ಅದರಂತೆ ಗೋಧ್ರಾ ನಂತರದ ಹತ್ಯಾಕಾಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಐಟಿ ವಿಚಾರಣೆ ನಡೆಸಿದ ಒಂಭತ್ತು ಪ್ರಮುಖ ಪ್ರಕರಣಗಳಲ್ಲಿ ಎಂಟರಲ್ಲಿ ಸಮಯ ಮತ್ತು ವಿಚಾರಣೆಗಳು ಮುಗಿಯುವುದರೊಂದಿಗೆ ಪ್ರಕರಣಗಳು ನಿಷ್ಪ್ರಯೋಜಕವಾಗಿವೆ ಎಂದು ನ್ಯಾಯಾಲಯ ಹೇಳಿದೆ.

Share This Article