ಗಣೇಶ ಪೆಂಡಾಲ್ ಗಳಿಗೆ ಸಾವರ್ಕರ ಭಾವಚಿತ್ರ ವಿತರಿಸಿದ ಬಿಜೆಪಿ

khushihost
ಗಣೇಶ ಪೆಂಡಾಲ್ ಗಳಿಗೆ ಸಾವರ್ಕರ ಭಾವಚಿತ್ರ ವಿತರಿಸಿದ ಬಿಜೆಪಿ

ಬೆಳಗಾವಿ: ನಗರದ ವಿವಿಧ ಕಡೆಗಳಲ್ಲಿ ಗಣೇಶ ಮಂಟಪಗಳಿಗೆ ಭೇಟಿ ಕೊಟ್ಟ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಾವರ್ಕರ ಭಾವಚಿತ್ರ ವಿತರಣೆ ಮಾಡಿದ್ದಾರೆ.

ಈಗಾಗಲೇ ವಿವಿಧ ಬಡಾವಣೆಗಳಲ್ಲಿ 378 ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಆರಂಭಗೊಂಡಿವೆ. ಅಲ್ಲದೇ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ವಿವಿಧ ಗಣೇಶ ಮಂಟಪಗಳಿಗೆ ಭೇಟಿಕೊಟ್ಟ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಾವರ್ಕರ ಭಾವಚಿತ್ರವನ್ನು ವಿತರಣೆ ಮಾಡಿದ್ದಾರೆ.

ಸ್ಥಳೀಯ ಬಿಜೆಪಿ ನಾಯಕ ಮುರುಘೇಂದ್ರಗೌಡ ಪಾಟೀಲ ನೇತೃತ್ವದಲ್ಲಿ ಸಾವರ್ಕರ ಭಾವಚಿತ್ರ ವಿತರಣೆ ಮಾಡಲಾಗಿದ್ದು, ಈ ಬಾರಿಯ ಗಣೇಶೋತ್ಸವವನ್ನು ಸಾವರ್ಕರ ಗಣೇಶೋತ್ಸವವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ.

Share This Article