ಬಿಜೆಪಿ ಮುಖಂಡನ ಹೆಸರು ಬರೆದಿಟ್ಟು ವ್ಯಕ್ತಿಯ ಆತ್ಮಹತ್ಯೆ 

khushihost
ಬಿಜೆಪಿ ಮುಖಂಡನ  ಹೆಸರು ಬರೆದಿಟ್ಟು ವ್ಯಕ್ತಿಯ ಆತ್ಮಹತ್ಯೆ 

ಬೆಳಗಾವಿ : ಬಿಜೆಪಿ ನಾಯಕರೊಬ್ಬರು  ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಮಚ್ಛೆಯ ನೆಹರೂ ನಗರದಲ್ಲಿ ಬೆಳಕಿಗೆ ಬಂದಿದೆ.

28 ವರ್ಷದ ಸಾವಿಯೋ ಪಿಳೈ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಪತ್ರ ಬರೆದಿಟ್ಟಿದ್ದು, ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಹಾಗು ಇನ್ನಿಬ್ಬರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಗಂಡ ತೀರಿಕೊಂಡಿರುವ ಎರಡು ಮಕ್ಕಳ ತಾಯಿಯಾದ ರೇಣುಕಾ ಎಂಬ ಮಹಿಳೆಯೋರ್ವಳ ಜೊತೆ ಹಿಂಡಲಗಾದ ಗಣೇಶ ನಗರದಲ್ಲಿ ವಾಸಿಸುವ ಸಾವಿಯೋ ಪಿಳೈ ಅವರು ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕ್ಯಾಂಪ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಆಕೆ ತನ್ನನ್ನು ಮದುವೆಯಾಗಬೇಕೆಂದು ತೀವ್ರ ಒತ್ತಡ ತಂದಿದ್ದು ಆದರೆ ಎರಡು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಲು ಸಾವಿಯೋ ಕುಟುಂಬ ನಿರಾಕರಿಸಿದೆ. ಈ ಬಗ್ಗೆ  ಇಬ್ಬರ ಮಧ್ಯೆ ಮನಸ್ತಾಪವಾಗಿ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಈ ವೇಳೆ ಬಿಜೆಪಿ ಮುಖಂಡ ಪೃಥ್ವಿ ಸಿಂಗ್  1 ಲಕ್ಷ 50 ಸಾವಿರ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಪೃಥ್ವಿ ಸಿಂಗ್ ಅವರು ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.

ಪೃಥ್ವಿ ಸಿಂಗ್ ಮತ್ತಿಬ್ಬರು ಒಂದೂವರೆ ಲಕ್ಷ ಪಡೆದಿದ್ದಲ್ಲದೇ ಇನ್ನೂ ಹೆಚ್ಚಿನ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಡೆತ್ ‌ನೋಟ್ ಬರೆದಿಟ್ಟು ಸಾವಿಯೋ ಪಿಳೈ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article