ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ 

khushihost
ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ 

ಲಂಡನ್: ಬ್ರಿಟನ್ ಪ್ರಧಾನಿ ಚುನಾವಣೆಗೆ ನಡೆದ ಫಲಿತಾಂಶ ಹೊರ ಬಿದ್ದಿದೆ. ಲಿಜ್ ಟ್ರಸ್ ಅವರು ಭಾರತದ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಬ್ರಿಟನ್ನಿನ ಮುಂದಿನ ಪ್ರಧಾನಿಯಾಗಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ಸದಸ್ಯರು , ಸೆಪ್ಟೆಂಬರ್ 5 ರಂದು, ಲಿಜ್ ಟ್ರಸ್ ಅವರನ್ನು ತಮ್ಮ ಮುಂದಿನ ನಾಯಕಿನನ್ನಾಗಿ ಆಯ್ಕೆ ಮಾಡಿದರು.

ಇದು ಅವರನ್ನು ಯುನೈಟೆಡ್ ಕಿಂಗ್ ಡಮ್ ನ ಮುಂದಿನ ಪ್ರಧಾನ ಮಂತ್ರಿಯನ್ನಾಗಿ ಮಾಡಿತು. ಬೋರಿಸ್ ಜಾನ್ಸನ್ ಅವರಿಂದ ಟ್ರಸ್ ಅಧಿಕಾರ ಸ್ವೀಕರಿಸಲಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಟ್ರಸ್ ಅವರು ಖಜಾನೆಯ ಮಾಜಿ ಚಾನ್ಸಲರ್ ರಿಷಿ ಸುನಕ್ ಅವರನ್ನು ಸೋಲಿಸಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ.

Share This Article