ಮನೆ ಮೇಲೆ ತಗಡಿನ ಪತ್ರೆ ಹಾಕುವ ವೇಳೆ ವಿದ್ಯುತ್‌ ತಗುಲಿ ಇಬ್ಬರು ಸ್ಥಳದಲ್ಲೇ ಸಾವು 

khushihost
ಮನೆ ಮೇಲೆ ತಗಡಿನ ಪತ್ರೆ ಹಾಕುವ ವೇಳೆ ವಿದ್ಯುತ್‌ ತಗುಲಿ ಇಬ್ಬರು ಸ್ಥಳದಲ್ಲೇ ಸಾವು 

ಬೆಳಗಾವಿ: ಮಳೆ ನೀರು ಸೋರದಂತೆ ಮನೆ ಮಾಳಿಗೆ ಮೇಲೆ ತಗಡಿನ ಪತ್ರೆಗಳನ್ನು ಹಾಕುವ ವೇಳೆ ವಿದ್ಯುತ್‌ ತಂತಿ ತಗಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಘಟನೆ ತಾಲ್ಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.

ವಿನಾಯಕ ಕಾಲಖಾಂಬಕರ (25), ಬೆನಕನಹಳ್ಳಿ ನಿವಾಸಿ ವಿಲಾಸ ಗೋ‍ಪಾಲ ಅಗಸಗೇಕರ (57) ಮೃತಪಟ್ಟವರು.

ವಿನಾಯಕ ಅವರ ಮನೆ ಮಳೆಯಿಂದಾಗಿ ಸೋರುತ್ತಿತ್ತು. ಈಗಾಗಲೇ ಇದ್ದ ತಗಡಿನ ಚಾವಣಿ ಮೇಲೆ ಹೊಸ ತಗಡುಗಳನ್ನು ಹಾಕಲು ವಿನಾಯಕ ಹಾಗೂ ವಿಲಾಸ ಛಾವಣಿ ಮೇಲೆ ಹತ್ತಿದ್ದರು.

ಮನೆ ಮೇಲೆ ಹಾದು ಹೋದ ವಿದ್ಯುತ್‌ ತಂತಿಗೆ ತಗಡು ಸಿಕ್ಕಿಕೊಂಡಿದ್ದರಿಂದ ಅದರ ಮೂಲಕ ವಿದ್ಯುತ್‌ ಪ್ರವಹಿಸಿ, ಇಬ್ಬರೂ ಕ್ಷಣ ಮಾತ್ರದಲ್ಲೇ ಮೃತಪಟ್ಟರು. ನೆರವಿಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿಗೂ ವಿದ್ಯುತ್‌ ತಂತಿ ತಗಲಿದ್ದರಿಂದ ಅವರು ಕೆಳಗೆ ಬಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article