ಬರ್ಬರವಾಗಿ ಅಣ್ಣನನ್ನು ಹತ್ಯೆಗೈದ ತಮ್ಮ 

khushihost
ಬರ್ಬರವಾಗಿ ಅಣ್ಣನನ್ನು ಹತ್ಯೆಗೈದ ತಮ್ಮ 

ವಿಜಯಪುರ: ಅಣ್ಣನನ್ನು ಆತನ ಸಹೋದರನೇ ಬರ್ಬರವಾಗಿ ಹತ್ಯೆಗೈದ ಘಟನೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ.

ಜಗ್ಗೇಶ ವಡ್ಡರ‌ (30) ಹತ್ಯೆಯಾದ ದುರ್ದೈವಿ. ರಾಹುಲ್ ವಡ್ಡರ ಕೊಲೆ ಮಾಡಿದ ಆರೋಪಿ. ನಿತ್ಯ ಮದ್ಯ ಸೇವಿಸಲು ತಮ್ಮನ ಬಳಿ ಅಣ್ಣ ಜಗ್ಗೇಶ ಹಣವನ್ನ ಕೇಳುತ್ತಿದ್ದನಂತೆ. ಅಣ್ಣನ ಕಾಟಕ್ಕೆ ರೋಸಿಹೋಗಿದ್ದ ತಮ್ಮ ರಾಹುಲ್, ನಿನ್ನೆ ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಹಣದ ವಿಚಾರಕ್ಕೆ ರಾತ್ರಿ ಇಬ್ಬರ ಮಧ್ಯೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಆಯುಧದಿಂದ ಇರಿದು ಅಣ್ಣನ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article