ತವರು ಮನೆಯಿಂದ ವಾಪಸ್ ಬಾರದ ಹೆಂಡತಿಗೆ ಗುಂಡಿಕ್ಕಿದ

khushihost
ತವರು ಮನೆಯಿಂದ ವಾಪಸ್ ಬಾರದ ಹೆಂಡತಿಗೆ ಗುಂಡಿಕ್ಕಿದ

ಅಥಣಿ : ತವರು ಮನೆಗೆ ಹೋಗಿದ್ದ ಹೆಂಡತಿ ವಾಪಸ್ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಹೆಂಡತಿ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

ಸೆಪ್ಟೆಂಬರ್ 11 ರಂದು ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕರೆಯಲು ಹೋಗಿದ್ದ ವೇಳೆ ಗಂಡನೇ ಫೈರಿಂಗ್ ಮಾಡಿದ್ದಾನೆ. ಗುಂಡು ಹಾರಿಸಿದ ಶಿವಾನಂದನನ್ನು ಪೊಲೀಸರು ಬಂಧಿಸಿದ್ದಾರೆ.

4 ವರ್ಷದ ಹಿಂದೆ ಶಿವಾನಂದ ಮತ್ತು ಪ್ರೀತಿಯ ಮದುವೆಯಾಗಿತ್ತು. ಆದರೆ ಗಂಡ ಶಿವಾನಂದನ ಅನೈತಿಕ ಸಂಬಂಧ, ಕಿರುಕುಳಕ್ಕೆ ಬೇಸತ್ತು ಪ್ರೀತಿ ತವರು ಮನೆ ಸೇರಿದ್ದಳು.

ಸೆಪ್ಟೆಂಬರ್ 11 ರ ರಾತ್ರಿ ಪ್ರೀತಿ ಅವರ ತವರು ಮನೆಗೆ ಬಂದ ಶಿವಾನಂದನು ತನ್ನ ಜೊತೆಗೆ ಬರುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಪತ್ನಿ ಪ್ರೀತಿ ನಿರಾಕರಿಸಿದದಾಗ ಪಿಸ್ತೂಲ್ ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಅದೃಷ್ಟವಶಾತ್ ಹೆಂಡತಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article