ಕನ್ನಡ ಕಡ್ಡಾಯಕ್ಕೆ ಹೊಸ ಕಾನೂನು ರಚನೆ

khushihost
ಕನ್ನಡ ಕಡ್ಡಾಯಕ್ಕೆ ಹೊಸ ಕಾನೂನು ರಚನೆ

ಬೆಂಗಳೂರು, ೧೪-ಕನ್ನಡ ಕಡ್ಡಾಯ ಮಾಡಲು ಕಾನೂನನ್ನೇ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ನಾನು ಕನ್ನಡ ಪರ ಇದ್ದೇನೆ. ಕನ್ನಡ ಉಳಿಸಲು, ಬೆಳೆಸಲು ಸರ್ಕಾರ ಬದ್ಧವಾಗಿದ್ದು ಇದರಲ್ಲಿ ಯಾವ ಕಾರಣಕ್ಕೂ ರಾಜಿ ಪ್ರಶ್ನೆಯೇ ಇಲ್ಲ. ನೆಲ ಜಲ ಭಾಷೆ ವಿಷಯದಲ್ಲಿ ರಾಜಕೀಯ ಮೀರಿ ನಿರ್ಧಾರ ಮಾಡುತ್ತೇವೆ, ಕರ್ನಾಟಕದಲ್ಲಿ ಕನ್ನಡವೇ ಅಗ್ರಮಾನ್ಯ ಭಾಷೆ ಆಗಿದೆ ಎಂದು ಹೇಳಿದರು.

ಕನ್ನಡವನ್ನು ಹೆಚ್ಚು ಬಳಸಲು ಒಂದು ಪ್ರತ್ಯೇಕ ಕಾನೂನು ತರುತ್ತಿದ್ದೇವೆ. ಕನ್ನಡವನ್ನು ನಾವು ಖಂಡಿತವಾಗಿ ರಕ್ಷಣೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.

Share This Article