ಬಾಗಲಕೋಟದಲ್ಲಿ ಮಕ್ಕಳ ಕಳ್ಳರೆಂದು ಬೆನ್ನಟ್ಟಿದ ಜನ : ಪಲ್ಟಿಯಾದ ಕಾರು 

khushihost
ಬಾಗಲಕೋಟದಲ್ಲಿ ಮಕ್ಕಳ ಕಳ್ಳರೆಂದು ಬೆನ್ನಟ್ಟಿದ ಜನ : ಪಲ್ಟಿಯಾದ ಕಾರು 

ಬಾಗಲಕೋಟ : ಮಕ್ಕಳ ಕಳ್ಳರೆಂದು ಭಾವಿಸಿ ಜನರು ಕಾರು ಬೆನ್ನತ್ತಿದಾಗ ತಪ್ಪಿಸಿಕೊಳ್ಳಲು ಹೋಗಿ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾದ ಘಟನೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ.

ಮಕ್ಕಳ ಕಳ್ಳರೆಂದು ಭಾವಿಸಿ ಜನರು ಕಾರೊಂದನ್ನು ಬೆನ್ನತ್ತಿದ್ದಾರೆ. ಈ ವೇಳೆ ಭಯಗೊಂಡ ಕಾರಿನವರು ತಪ್ಪಿಸಿಕೊಳ್ಳುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.

ಬೀಳಗಿಯಿಂದ ಗ್ರಾಮದ ಜನರು ಬೈಕ್​​ನಲ್ಲಿ ಕಾರು ಬೆನ್ನತ್ತಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವಾಗ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ದೇವರಾಜ ಭಾರತಿ, ಜಯದೀಪ ಜಗದಾಳೆ, ಮೊಹಮ್ಮದ​ ಇಲಿಯಾಸ್​ಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article