ಬಸ್ – ಬೈಕ್ ಮಧ್ಯೆ ಅಪಘಾತ : ಇಬ್ಬರ ಸಾವು

khushihost
ಬಸ್ – ಬೈಕ್ ಮಧ್ಯೆ ಅಪಘಾತ : ಇಬ್ಬರ ಸಾವು

ಬಾಗಲಕೋಟ: ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸಾವಿಗೀಡಾಗಿದ್ದ ಘಟನೆ ಬಾಗಲಕೋಟ ತಾಲೂಕಿನ ಸೀಗಿಕೇರಿ ಕ್ರಾಸ್​​ನಲ್ಲಿ ಸಂಭವಿಸಿದೆ.

ಶ್ರೀನಿವಾಸ ಹಂಸನೂರು (32), ಈಶ್ವರ ಮಾಚಕನೂರು (54) ಸಾವಿಗೀಡಾದವರು. ಕೆಎಸ್​ಆರ್​​ಟಿಸಿ ಬಸ್​ ಮುದ್ದೇಬಿಹಾಳದಿಂದ‌ ಬಾಗಲಕೋಟ ಮಾರ್ಗವಾಗಿ ಸಂಚರಿಸುತ್ತಿತ್ತು. ಬೈಕ್ ಸವಾರರು ಬಾಗಲಕೋಟದಿಂದ ಸೀಗಿಕೇರಿ ಕಡೆಗೆ ಸಾಗುತ್ತಿದ್ದರು. ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಕಾರಣ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಶ್ರೀನಿವಾಸ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗೊಂಡ ಈಶ್ವರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.

ಸ್ಥಳಕ್ಕೆ ಬಾಗಲಕೋಟ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article