ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ 40% ಲೂಟಿ ಮಾಡಿಲಾಗಿದೆಯೇ : ಕಾಂಗ್ರೆಸ್ ಪ್ರಶ್ನೆ

khushihost
ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ 40% ಲೂಟಿ ಮಾಡಿಲಾಗಿದೆಯೇ : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ 40% ಲೂಟಿ ಮಾಡಿಲಾಗಿದೆಯೇ ಬಿ.ಸಿ ನಾಗೇಶ ಅವರೇ? ತೆಳುವಾದ ಕಳಪೆ ಬಟ್ಟೆಗಳನ್ನು ನೀಡಲಾಗಿದೆ. ಇದರಲ್ಲೂ ಮೊಟ್ಟೆಯ ಕಮಿಷನ್‍ನಂತೆ, ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದೆ.

ಕಳೆಪೆ ಸಮವಸ್ತ್ರದ ಕುರಿತು ಪತ್ರಿಕೆಗಳಲ್ಲಿ ವಿದ್ಯಾರ್ಥಿನಿ ತನ್ನ ದುಪ್ಪಟ್ಟಾ ತೋರಿಸಿ ಕಷ್ಟ ತೋಡಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಆಸ್ಪತ್ರೆಗಳಿಗೆ ವಿದ್ಯುತ್ ಕಡಿತಗೊಳ್ಳುತ್ತದೆ, ಕಳಪೆ ವೆಂಟಿಲೇಟರ್‌ಗಳು ಕೈಕೊಡುತ್ತಿವೆ, ಈಗ ಔಷಧ ಪೂರೈಕೆಯೂ ನಿಂತಿದೆ. 40% ಕಮಿಷನ್ ಸರ್ಕಾರ ಇಷ್ಟೊಂದು ದಿವಾಳಿಯಾಗಿದೆಯೇ? ಸುಧಾಕರ ಎಂಬ ಅಸಮರ್ಥ ಸಚಿವರ ದುರಾಡಳಿತದಲ್ಲಿ ಜನ ಸಾವಿನ ಮನೆ ಸೇರುವಂತಾಗಿದೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

Share This Article