ಬೆಳಗಾವಿಗೆ ಬಂತು ಮತ್ತೊಂದು ಜೀವಂತ ಹೃದಯ 

khushihost
ಬೆಳಗಾವಿಗೆ ಬಂತು ಮತ್ತೊಂದು ಜೀವಂತ ಹೃದಯ 

ಬೆಳಗಾವಿ: ಬೆಳಗಾವಿಯ ಕೆಎಲ್‌ಇಎಸ್ ಆಸ್ಪತ್ರೆಗೆ ನಸುಕಿನ ಜಾವದಲ್ಲಿ ಜೀವಂತ ಹೃದಯ ಸಾಗಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಯಿತು.

ಆಪಘಾತದಿಂದಾಗಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿಯೊಬ್ಬರ ಮಿದುಳು ನಿಷ್ಕ್ರಿಯಗೊಂಡಿತ್ತು.ಅವರ ಕುಟುಂಬ ವರ್ಗದವರೊಂದಿಗೆ ಚರ್ಚಿಸಿದ ವೈದ್ಯರು ಹೃದಯ ದಾನ ಮಾಡಲು ಪ್ರೇರೇಪಿಸಿದರು.

ಶುಕ್ರವಾರ ನಸುಕಿನ 4 ಗಂಟೆ ಸುಮಾರಿಗೆ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ತರಲಾಯಿತು. ಹೃದ್ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿ ಕಸಿ ಮಾಡಲಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಪೊಲೀಸ್ ಸಿಬ್ಬಂದಿ ಜೀರೊ ಟ್ರಾಫಿಕ್ ನಿರ್ಮಾಣ ಮಾಡಿ ಸಹಕರಿಸಿದರು.

Share This Article