ಜಮೀನು ವಿಚಾರವಾಗಿ ತಂದೆಯನ್ನೇ ಕೊಂದ ಮಗ 

khushihost
ಜಮೀನು ವಿಚಾರವಾಗಿ ತಂದೆಯನ್ನೇ ಕೊಂದ ಮಗ 

ಬಾಗಲಕೋಟ: ಜಮೀನು ವಿಚಾರವಾಗಿ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ಕೆರೆ ಬಡಾವಣೆಯಲ್ಲಿ ನಡೆದಿದೆ‌.

65 ವರ್ಷದ ಮಾಳಪ್ಪ ಹಳ್ಳೂರ ಮೃತ ದುರ್ದೈವಿ. ಎರಡು ಗುಂಟೆ ಜಾಗಕ್ಕಾಗಿ ತಂದೆ ಮಾಳಪ್ಪ ಅವರನ್ನು ಮಗನಾದ ತುಕ್ಕಪ್ಪ ಶೆಡ್ ಮನೆಯಲ್ಲಿ ಕಟ್ಟಿಗೆಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ.

ನಿನ್ನೆ ರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದ್ದು, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article