ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿದ್ದ ಸಾವರ್ಕರ ಪೋಸ್ಟರ್, ಫ್ಲೆಕ್ಸ ತೆರವು

khushihost
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿದ್ದ ಸಾವರ್ಕರ ಪೋಸ್ಟರ್, ಫ್ಲೆಕ್ಸ ತೆರವು

ಹುಬ್ಬಳ್ಳಿ : ಸರಕಾರದ ಆದೇಶ ಧಿಕ್ಕರಿಸಿ ಈದ್ಗಾ ಮೈದಾನದ ಗಣೇಶ ಮಂಟಪದಲ್ಲಿ ಹಚ್ಚಿದ್ದ ಸಾವರ್ಕರ ಪೋಸ್ಟರ್ ಮತ್ತು ಫ್ಲೆಕ್ಸ್ ಅನ್ನು ಪೊಲೀಸರು ತೆರವುಗೊಳಿಸಿದರು.

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮಂಟಪದಲ್ಲಿ ಗಣೇಶ ಮೂರ್ತಿ ಹೊರತು ಯಾವುದೇ ಮೂರ್ತಿ, ಫೋಟೊ, ಫ್ಲೆಕ್ಸ ಅಳವಡಿಸುವಂತಿಲ್ಲ ಎಂಬ ಕಟ್ಟಳೆಯೊಂದಿಗೆ ಆಯೋಜಕರಿಗೆ ಅನುಮತಿ ನೀಡಿತ್ತು.

ಆದರೆ ನಿನ್ನೆ ಬುಧವಾರ ಅದನ್ನು ಮೀರಿ ಗಣೇಶ ಮೂರ್ತಿಯ ಹಿಂಬದಿಯ ಪೆಂಡಾಲ್ ಮೇಲೆ ಸಾವರ್ಕರ್ ಭಾವಚಿತ್ರವುಳ್ಳ ಫ್ಲೆಕ್ಸ್ ಅಳವಡಿಸಿ, ಮಂಟಪದಲ್ಲಿ ಅವರ ಪೋಸ್ಟರ್ ಹಚ್ಚಲಾಗಿತ್ತು.

ಪೋಲೀಸರ ವಿರೋಧದ ಮಧ್ಯೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ ಸಾವರ್ಕರ ಭಾವಚಿತ್ರ, ಫ್ಲೆಕ್ಸ್ ಅಳವಡಿಸಿದ್ದರು. ಸಾವರ್ಕರ ಫೋಟೋ, ಫ್ಲೆಕ್ಸ್ ತೆಗೆದು ಈದ್ಗಾ ಮೈದಾನದ ಬದಿಗಿನ ರಸ್ತೆಯಲ್ಲಿ ಅಳವಡಿಸಲಾಗಿದೆ.

Share This Article