ರಾಜ್ಯಕ್ಕೆ ಆಗಮಿಸಿದ “ಭಾರತ ಜೋಡೋ” ಯಾತ್ರೆ : ಬರ ಮಾಡಿಕೊಂಡ ಸಿದ್ದರಾಮಯ್ಯ

khushihost
ರಾಜ್ಯಕ್ಕೆ ಆಗಮಿಸಿದ “ಭಾರತ ಜೋಡೋ” ಯಾತ್ರೆ : ಬರ ಮಾಡಿಕೊಂಡ ಸಿದ್ದರಾಮಯ್ಯ

ಚಾಮರಾಜನಗರ : ದೇಶದ ಜನರನ್ನು ಒಂದುಗೂಡಿಸಲು ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ “ಭಾರತ ಜೋಡೋ” ಯಾತ್ರೆ ಇಂದು ರಾಜ್ಯಕ್ಕೆ ಆಗಮಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಮಾಡಿಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಹಾಜರಿದ್ದರು.

ನಗರದ ಹಲವು ಕಡೆ ಬ್ಯಾನರ್, ಫ್ಲೆಕ್ಸಗಳು ರಾರಾಜಿಸುತ್ತಿದೆ. ಗುಂಡ್ಲುಪೇಟೆಯ ಅಂಬೇಡ್ಕರ‌ ಭವನದ ಎದುರಿನ ಖಾಸಗಿ ಜಾಗದಲ್ಲಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಕನಿಷ್ಠ 25ರಿಂದ 30 ಸಾವಿರ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ.

Share This Article