ಫಲ ಕೊಡದ ಸತ್ಯ ನಾರಾಯಣ ಪೂಜೆ : ಪೂಜಾರಿಗೆ ಥಳಿತ 

khushihost
ಫಲ ಕೊಡದ ಸತ್ಯ ನಾರಾಯಣ ಪೂಜೆ : ಪೂಜಾರಿಗೆ ಥಳಿತ 

ಇಂದೋರ: ಇಂದೋರ‌ನಲ್ಲಿ ಅರ್ಚಕರೊಬ್ಬರು ಸತ್ಯನಾರಾಯಣ ಪೂಜೆಯ ಸಮಯದಲ್ಲಿ ಮಾಡಿದ ಧಾರ್ಮಿಕ ಕ್ರಿಯೆಗಳು ತಪ್ಪು ಫಲಿತಾಂಶ ನೀಡಿದೆ ಎಂಬ ಶಂಕೆಯ ಮೇಲೆ ಅಪ್ಪ-ಮಗ ಆರ್ಚಕನನ್ನು ಥಳಿಸಿದ್ದಾರೆ.

ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರನ್ನು ಪೂಜೆಗೆ ಆಯೋಜಿಸಿದ್ದವರು ಹಾಗೂ ಇಬ್ಬರು ಪುತ್ರರು ಥಳಿಸಿದ್ದಾರೆ ಎಂದು ಚಂದನನಗರ ಪೊಲೀಸ್ ಠಾಣೆ ಪ್ರಭಾರಿ ಅಭಯ್ ನೇಮಾ ತಿಳಿಸಿದ್ದಾರೆ. ಇಲ್ಲಿನ ಸ್ಕೀಮ್ ನಂಬರ್ 71 ರ ನಿವಾಸಿಗಳು ಗಾಯಗೊಂಡಿದ್ದ ಅರ್ಚಕರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಲಕ್ಷ್ಮಿಕಾಂತ ಶರ್ಮಾ ಅವರ ಮನೆಯಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಆಹ್ವಾನಿಸಲಾಯಿತು ಮತ್ತು ಕಾರ್ಯಕ್ರಮ ಮುಗಿದ ನಂತರ ನಾನು ಮನೆಗೆ ತೆರಳಿದೆ. ಆದರೆ, ತಡರಾತ್ರಿ ಲಕ್ಷ್ಮೀಕಾಂತ ಮತ್ತು ಅವರ ಪುತ್ರರಾದ ವಿಫುಲ್ ಹಾಗೂ ಅರುಣ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 60 ವರ್ಷದ ಅರ್ಚಕರು ತಿಳಿಸಿದ್ದಾರೆ.

ಅರ್ಚಕರು ತಪ್ಪಾದ ರೀತಿಯಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಿದ ನಂತರ ಅರುಣ್ ವಿಲಕ್ಷಣವಾಗಿ ವರ್ತಿಸಲು ಪ್ರಾರಂಭಿಸಿದ ಎಂದು ದಾಳಿಕೋರರು ತಿಳಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ಲಕ್ಷ್ಮೀಕಾಂತ ಶರ್ಮಾ ಮತ್ತು ಅವರ ಮಕ್ಕಳಾದ ವಿಪುಲ್ ಮತ್ತು ಅರುಣ ಅವರನ್ನು ಬಂಧಿಸಲಾಗಿದೆ ಎಂದು ನೇಮಾ ಹೇಳಿದರು. ಅರುಣ‌ಗೆ ಮದುವೆಗೆ ಸೂಕ್ತ ಹೊಂದಾಣಿಕೆ ಸಿಗದ ಕಾರಣ ಪೂಜೆ ನಡೆಸಲಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

Share This Article