ಅನುಕಂಪದ ಆಧಾರದಲ್ಲಿ ನೀಡುವ ನೌಕರಿ ಹಕ್ಕಲ್ಲ : ಸುಪ್ರೀಮ ಕೋರ್ಟ

khushihost
ಅನುಕಂಪದ ಆಧಾರದಲ್ಲಿ ನೀಡುವ ನೌಕರಿ ಹಕ್ಕಲ್ಲ : ಸುಪ್ರೀಮ ಕೋರ್ಟ

ಹೊಸದಿಲ್ಲಿ : ಅನುಕಂಪದನ ನೌಕರಿ ಒಂದು ರೀತಿಯ ವಿನಾಯ್ತಿಯೇ ವಿನಃ ಅದು ಹಕ್ಕು ಅಲ್ಲ. ಕುಟುಂಬದ ಸದಸ್ಯ ಹಠಾತ್ ನಿಧನರಾದಾಗ ಆದ ಹಾನಿಯಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅನುಕಂಪದ ಉದ್ಯೋಗ ನೀಡಲಾಗುತ್ತದೆ ಎಂದು ಸುಪ್ರೀಮ ಕೋರ್ಟ ಹೇಳಿದೆ.

ಮಹಿಳೆಯೊಬ್ಬರು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ ಸ್ವಾಮ್ಯದ ರಸಗೊಬ್ಬರ ಹಾಗೂ ರಾಸಾಯನಿಕ ಕಂಪನಿ ಟ್ರಾವಂಕೋರ್ ಲಿ.ಗೆ ಕೇರಳ ಹೈಕೋರ್ಟ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಮ ಕೋರ್ಟನಲ್ಲಿ ಅರ್ಜಿ ದಾಖಲಾಗಿತ್ತು.

ವಿಚಾರಣೆ ನಡೆಸಿದ ಸುಪ್ರೀಮ ಕೋರ್ಟ ನ್ಯಾ. ಎ. ಆರ್. ಶಾ ಹಾಗೂ ನ್ಯಾ. ಕೃಷ್ಣ ಮುರಾರಿ ಅವರಿದ್ದ ಪೀಠ, ಟ್ರಾವಂಕೋರ್ ಲಿ. ಉದ್ಯೋಗಿಯಾಗಿದ್ದ ಮಹಿಳೆಯ ತಂದೆ ತೀರಿಕೊಂಡು 2 ದಶಕಗಳೇ ಕಳೆದಿವೆ. ಹೀಗಾಗಿ ಅರ್ಜಿದಾರ ಮಹಿಳೆ ಅನುಕಂಪದ ನೌಕರಿ ಪಡೆಯಲು ಅರ್ಹಳಲ್ಲ ಎಂದು ಹೇಳಿದೆ.

Share This Article