ಕರ್ನಾಟಕದ ಸರ್ಕಾರಿ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ

khushihost
ಕರ್ನಾಟಕದ ಸರ್ಕಾರಿ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ

ಗದಗ: ನೈರುತ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಜೈ ಮಹಾರಾಷ್ಟ್ರ ಎಂದು ನಮೂದಾಗಿರುವಂತ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ವಿತರಿಸಿದ ಗದಗ ಘಟಕ ಹಾಗೂ ರೋಣಾ ಘಟಕದ ಸಾರಿಗೆ ಬಸ್ ನಲ್ಲಿ ನಡೆದಿದೆ.

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಇಂದು ಗದಗ ಘಟಕ ಹಾಗೂ ರೋಣಾ ಘಟಕದ ಸಾರಿಗೆ ಬಸ್ ನಲ್ಲಿ ವಿತರಿಸಿರುವಂತ ಟಿಕೆಟ್ ಗಳಲ್ಲಿ ಜೈ ಮಹಾರಾಷ್ಟ್ರ ಎಂಬುದಾಗಿ ಇದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿತರಿಸಿದಂತ ಈ ಟಿಕೆಟ್ ಕಂಡು ಪ್ರಯಾಣಿಕರೇ ದಂಗಾಗಿ ಹೋಗಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂಬುದಾಗಿ ನಮೂದಿಸಬೇಕಿದ್ದಂತ ಟಿಕೆಟ್ ಪೇಪರ್ ನಲ್ಲಿ ಜೈ ಮಹಾರಾಷ್ಟ್ರ ಎಂಬುದಾಗಿ ನಮೂದಿಸಿರುವ ರೋಲ್ ನ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ.

ಟಿಕೆಟ್ ವೈರಲ್ ಆಗುತ್ತಿದಂತೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ಗದಗ ವಿಭಾಗದ ರೋಣ ಮತ್ತು ಗದಗ ಘಟಕದಲ್ಲಿ ಇಟಿಎಂ ಟಿಕೇಟ್ ಗಳು ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಲಾಂಛನ ವಿರುವ ಟಿಕೆಟ್ ಗಳನ್ನು ನೀಡಿರುವ ಬಗ್ಗೆ ಪರಿಶೀಲಿಸಲಾಗಿದೆ.

ಈ ಇಟಿಎಂ ರೋಲ್ ಗಳನ್ನು ಪೂರೈಕೆ ಮಾಡುವ ಕಣ್ತಪ್ಪಿನಿಂದ ಎರಡು ಬಾಕ್ಸ್ ಗಳು ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯವರಿಗೆ ಕಳುಹಿಸುವುದನ್ನು, ನಮ್ಮ ಸಂಸ್ಥೆಗೆ ಪೂರೈಕೆ ಮಾಡಿರುತ್ತಾರೆ. ಇದನ್ನು ಘಟಕಗಳಲ್ಲಿ ಪರಿಶೀಲನೆ ಮಾಡದೇ ನಿರ್ವಾಹಕರಿಗೆ ವಿತರಿಸಿರುತ್ತಾರೆ. ಆ ರೋಲ್ ಗಳನ್ನು ನಿರ್ವಾಹಕರು ನೋಡದೇ ಟಿಕೆಟ್ ನೀಡಿರುತ್ತಾರೆ ಎಂದಿದೆ.

Share This Article