ವಂದೇ ಭಾರತ ಎಕ್ಸ್‌ಪ್ರೆಸ್‌ಗೆ ಎಮ್ಮೆಗಳ ಡಿಕ್ಕಿ : ಎಮ್ಮೆ ಮಾಲೀಕರ ವಿರುದ್ಧ ಎಫ್‌ಐಆರ್ 

khushihost
ವಂದೇ ಭಾರತ ಎಕ್ಸ್‌ಪ್ರೆಸ್‌ಗೆ ಎಮ್ಮೆಗಳ ಡಿಕ್ಕಿ : ಎಮ್ಮೆ ಮಾಲೀಕರ ವಿರುದ್ಧ ಎಫ್‌ಐಆರ್ 

ಗಾಂಧಿನಗರ : ಎಮ್ಮೆಗಳ ಹಿಂಡು ಮುಂಬೈ-ಗಾಂಧಿನಗರ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಢಿಕ್ಕಿ ಹೊಡೆದ ಘಟನೆಯ ಸಂಬಂಧ ಗುಜರಾತ್‌ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಎಮ್ಮೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದೆ.

ಇಲ್ಲಿಯವರೆಗೆ ಎಮ್ಮೆಗಳ ಮಾಲೀಕರನ್ನು ಗುರುತಿಸಲು ರೈಲ್ವೆ ಪೊಲೀಸರಿಗೆ ಸಾಧ್ಯವಾಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ರೈಲು ಗುಜರಾತ್‌ನ ವತ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು.

ಅಹಮದಾಬಾದ‌ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲು ಮಾರ್ಗದಲ್ಲಿ ಬಂದ ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ಆರ್‌ಪಿಎಫ್ ದಾಖಲಿಸಿದೆ ಎಂದು ಡಬ್ಲ್ಯುಆರ್‌ನ ಹಿರಿಯ ವಕ್ತಾರ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.

ಮುಂಬೈ ಸೆಂಟ್ರಲ್ ಡಿಪೋದಲ್ಲಿ ಹಾನಿಗೊಳಗಾದ ರೈಲಿಗೆ ಹೊಸದಾಗಿ ಕೋನ್ ಅನ್ನು ಅಳವಡಿಸಲಾಗಿದ್ದು, ರೈಲನ್ನು ಮತ್ತೆ ಸೇವೆಗೆ ಆರಂಭಿಸಲಾಗಿದೆ.

Share This Article