ಎಸ್ಕಾರ್ಟ ಇಲ್ಲದೇ ಮನೆಗೆ ಹೋಗು : ಸಿದ್ದರಾಮಯ್ಯಗೆ ಸವಾಲು ಹಾಕಿದ್ದ ಪೇದೆ ಅಮಾನತು

khushihost
ಎಸ್ಕಾರ್ಟ ಇಲ್ಲದೇ ಮನೆಗೆ ಹೋಗು : ಸಿದ್ದರಾಮಯ್ಯಗೆ ಸವಾಲು ಹಾಕಿದ್ದ ಪೇದೆ ಅಮಾನತು

ವಿಜಯಪುರ : ಪೊಲೀಸ್ ಎಸ್ಕಾರ್ಟ ಇಲ್ಲದೇ ಮನೆಗೆ ಹೋಗು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ  ಸವಾಲು ಹಾಕಿದ್ದ ಕಾನಸ್ಟೇಬಲ್ ನನ್ನು ಅಮಾನತುಗೊಳಿಸಲಾಗಿದೆ.

ವಿಜಯಪುರ ಗ್ರಾಮೀಣಾ ಠಾಣಾ ಪೊಲೀಸ್ ಪೇದೆ ರಾಜಶೇಖರ ಖಾನಾಪುರ ಫೇಸ್ ಬುಕ್ ನಲ್ಲಿ ಸಿದ್ದರಾಮಯ್ಯ ಭಾರತ್ ಜೋಡೋ ಯಾತ್ರೆಗೆ ಅಡ್ಡಿ ಪಡಿಸುವ ಬಿಜೆಪಿ ಹುನ್ನಾರದಲ್ಲಿ ಪೊಲೀಸ್‌ನವರೇನಾದರೂ ಶಾಮೀಲಾದ್ರೆ.. ಎಂಬ ಹೇಳಿಕೆಗೆ ಕಾಮೆಂಟ್ ಮಾಡಿದ್ದಾರೆ.

ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್‌ ರಾಜಶೇಖರ ಖಾನಾಪುರ ಸವಾಲು ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧಕ್ಕೆ ಕಾರಣವಾಗಿತ್ತು.

ಈ ಕುರಿತು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ ಸುಬ್ರಹ್ಮಣ್ಯ ಪೇದೆ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆನಂದ ಕುಮಾರ ಅವರು ರಾಜಶೇಖರ ಖಾನಾಪುರನನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಪೊಲೀಸ್ ಪೇದೆ ರಾಜಶೇಖರ ಖಾನಾಪುರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅಭಿಮಾನಿಗಳು ಆಗ್ರಹಿಸಿದ್ದರು.

Share This Article