ಮೀಸಲಾತಿ ಹೆಚ್ಚಳ: ಯಾವತ್ತೂ ನಿಮ್ಮ ಗುಲಾಮರಾಗಿ ಇರ್ತೀವಿ ಎಂದ ಶಾಸಕ ರಾಜು ಗೌಡ

khushihost
ಮೀಸಲಾತಿ ಹೆಚ್ಚಳ: ಯಾವತ್ತೂ ನಿಮ್ಮ ಗುಲಾಮರಾಗಿ ಇರ್ತೀವಿ ಎಂದ ಶಾಸಕ ರಾಜು ಗೌಡ

ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ವಿಶೇಷ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದೆ. ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಶನಿವಾರ ಅನುಮೋದನೆ ನೀಡಿದೆ.

ಈ ವಿಚಾರಕ್ಕೆ ಸಂತಸ ವ್ಯಕ್ತಪಡಿಸಿದ ಸುರಪುರ ಶಾಸಕ ರಾಜುಗೌಡ ಪ್ರತಿಕ್ರಿಯೆ ನೀಡಿದ್ದು, ಯಾವತ್ತೂ ನಿಮ್ಮ ಗುಲಾಮರಾಗಿ ಇರ್ತೀವಿ ಎಂದು ಹೇಳಿದ್ದಾರೆ.

ವಾಲ್ಮೀಕಿ ಜಯಂತಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡು ನಮಗೆ ಜೇನು ತಿನ್ನಿಸುವ ಕೆಲಸ ಮಾಡಿದ್ದಾರೆ. ಈ ಜೀವ ಇರುವವರೆಗೆ ನಿಮಗೆ ಗುಲಾಮರಾಗಿ ಇರ್ತಿವಿ ಎಂದು ಹೇಳಿದರು.

ಜೀವನದಲ್ಲಿ ಮರೆಯಲಾದ ದಿನ ಇದು, ಇಂತಹ ಕೆಲಸ ಆಗಬೇಕು ಅಂದರೆ ಎರಡು ಗುಂಡಿಗೆ ಇರಬೇಕು. ಆ ಗುಂಡಿಗೆ ನಮ್ಮ ಬಸಪ್ಪಣ್ಣನಿಗೆ ಇದೆ. ಅವರು ನಿಜವಾದ ಗಂಡುಗಲಿ ಎಂದು ಬೊಮ್ಮಾಯಿ ಅವರನ್ನು ಹೊಗಳಿದ್ದಾರೆ.

Share This Article