ಶಿಂಧೆ ಬಣಕ್ಕೆ ಎರಡು ಖಡ್ಗಗಳು ಮತ್ತು ಶೀಲ್ಡ ಇರುವ ಚಿಹ್ನೆ ಹಂಚಿಕೆ   

khushihost
ಶಿಂಧೆ ಬಣಕ್ಕೆ ಎರಡು ಖಡ್ಗಗಳು ಮತ್ತು ಶೀಲ್ಡ ಇರುವ ಚಿಹ್ನೆ ಹಂಚಿಕೆ   

ಹೊಸದಿಲ್ಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಎರಡು ಖಡ್ಗಗಳು ಮತ್ತು ಶೀಲ್ಡ ಇರುವ ಚಿಹ್ನೆಯನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿದೆ. ಅವರಿಗೆ ನಿನ್ನೆ ಬಾಳಾಸಾಹೇಬಾಂಚಿ ಶಿವಸೇನಾ ಎಂಬ ಹೆಸರನ್ನು ನೀಡಲಾಯಿತು.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗದಿಂದ ಶಿವಸೇನೆಯ ಏಕನಾಥ ಶಿಂಧೆ ಹಾಗೂ ಉದ್ಧವ ಠಾಕ್ರೆ ಅವರಿಗೆ ನೀಡಲಾಗಿದ್ದ ಬಿಲ್ಲು-ಬಾಣದ ಚಿನ್ಹೆಯನ್ನು ರದ್ದುಗೊಳಿಸಿತ್ತು. ಆ ಬಳಿಕ, ಹೊಸ ಚಿಹ್ನೆ ನೀಡುವುದಕ್ಕಾಗಿ ಆಯೋಗಕ್ಕೆ ಏಕನಾಥ ಶಿಂಧೆ ಬಣ ಮನವಿ ಮಾಡಿತ್ತು.

ಈ ಬೆನ್ನಲ್ಲೇ ಇಂದು ಚುನಾವಣಾ ಆಯೋಗದಿಂದ ಶಿವಸೇನೆಯ ಏಕನಾಥ ಶಿಂಧೆ ಬಣಕ್ಕೆ ಎರಡು ಖಡ್ಗಗಳು ಮತ್ತು ಶೀಲ್ಡ ಇರುವ ಚಿಹ್ನೆಯನ್ನು ಲಾಂಛನವಾಗಿ ಹಂಚಿಕೆ ಮಾಡಲಾಗಿದೆ.

Share This Article