ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವದು ನಮ್ಮ ಕೆಲಸವಲ್ಲ : ಸುಪ್ರೀಮ ಕೋರ್ಟ 

khushihost
ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವದು ನಮ್ಮ ಕೆಲಸವಲ್ಲ : ಸುಪ್ರೀಮ ಕೋರ್ಟ 

ಹೊಸದಿಲ್ಲಿ: ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಲು ಸುಪ್ರೀಮ ಕೋರ್ಟ ನಿರಾಕರಿಸಿದೆ.

ಇಂತಹ ಪ್ರಕರಣಗಳ ಬಗ್ಗೆ ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದ ನ್ಯಾಯಮೂರ್ತಿಗಳಾದ ಸಂಜಯ ಕಿಶನ್ ಕೌಲ್ ಮತ್ತು ಅಭಯ ಎಸ್. ಓಕಾ ಅವರಿದ್ದ ಪೀಠ ಹೇಳಿದೆ.

ಘೋಷಿಸದೇ ಇರುವುದರಿಂದ ಅರ್ಜಿದಾರರ ಯಾವ ಮೂಲಭೂತ ಹಕ್ಕಿನ ಮೇಲೆ ಪರಿಣಾಮವಾಗಿದೆ ಎಂದೂ ಅದು ಪ್ರಶ್ನಿಸಿದೆ.

ಇದು ನ್ಯಾಯಾಲಯದ ಕೆಲಸವೇ? ದಂಡ ವಿಧಿಸಲು ನಮ್ಮನ್ನು ಒತ್ತಾಯಿಸುವಂತಹ ಅರ್ಜಿಗಳನ್ನು ನೀವೇಕೆ ಸಲ್ಲಿಸುತ್ತೀರಿ? ಯಾವ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ? ನೀವು ನ್ಯಾಯಾಲಯಕ್ಕೆ ಬಂದಿದ್ದೀರಿ ಕಾನೂನನ್ನು ಗಾಳಿಗೆ ತೂರಲಾಗುತ್ತದೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಗೋಸಂರಕ್ಷಣೆ ಬಹಳ ಮುಖ್ಯವಾದ ವಿಷಯ. ಅದನ್ನು ಸರಕಾರ ಪರಿಗಣಿಸಲಿ, ನಾನು ಬಲವಂತವಾಗಿಲ್ಲ. ನಾವು ಹಸುಗಳಿಂದ ಎಲ್ಲವನ್ನೂ ಪಡೆಯುತ್ತಿದೇವೆ ಎಂದು ಹೇಳಿದರು.

ಇದು ನ್ಯಾಯಾಲಯದ ಕೆಲಸವಲ್ಲ ಎಂದು ನ್ಯಾಯಾಲಯ ಮನವಿ ಪುರಸ್ಕರಿಸಲು ಒಪ್ಪದ ಕಾರಣ ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರು ನಿರ್ಧರಿಸಿದರು.

Share This Article