ಕೇಂದ್ರ ಸರ್ಕಾರಕ್ಕೆ ಭಾರತೀಯರ ಖಾತೆಗಳ ಪಟ್ಟಿ ನೀಡಿದ ಸ್ವೀಸ್ ಬ್ಯಾಂಕ್ 

khushihost
ಕೇಂದ್ರ ಸರ್ಕಾರಕ್ಕೆ ಭಾರತೀಯರ ಖಾತೆಗಳ ಪಟ್ಟಿ ನೀಡಿದ ಸ್ವೀಸ್ ಬ್ಯಾಂಕ್ 

ಹೊಸದಿಲ್ಲಿ: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣದ ಮಾಹಿತಿ ಹಾಗೂ ಖಾತೆದಾರರ ನಾಲ್ಕನೇ ವಿವರವನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ. ವೈಯುಕ್ತಿಕ ವ್ಯಕ್ತಿಗಳ ಖಾತೆ, ಕಾರ್ಪೋರೇಟ್, ಟ್ರಸ್ಟ್ ಖಾತೆ ಸೇರಿದಂತೆ 100ಕ್ಕೂ ಹೆಚ್ಚು ಖಾತೆದಾರರ ಮಾಹಿತಿಯನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ.

ವಾರ್ಷಿಕ ಮಾಹಿತಿ ವಿನಿಮಿಯ ನೀತಿ ಅಡಿಯಲ್ಲಿ ಸ್ವಿಸ್ ಬ್ಯಾಂಕ್ 101 ದೇಶಗಳ 34 ಲಕ್ಷ ಖಾತೆಗಳ ಮಾಹಿತಿಯನ್ನು ಆಯಾ ದೇಶಕ್ಕೆ ನೀಡಿದೆ.

ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ನೀಡಿದ ಮಾಹಿತಿಯ ಪ್ರಕಾರ, ಭಾರತೀಯರ ಉಳಿತಾಯ ಖಾತೆಯ ಠೇವಣಿ 4,800 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಇದು ಕಳೆದ 7 ವರ್ಷಗಳ ಗರಿಷ್ಠ. 15.61 ಸಾವಿರ ಕೋಟಿ ರೂ.ಗಳಷ್ಟು ಮೌಲ್ಯದ ಬಾಂಡ್‌, ಭದ್ರತೆಗಳನ್ನು ಭಾರತೀಯರ ಗ್ರಾಹಕರ ಹೆಸರಿನಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿಡಲಾಗಿದೆ ಎಂದು ವರದಿ ತಿಳಿಸಿದೆ.

Share This Article