ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕುರಿತು ಕೇಂದ್ರದಿಂದ ಮಾಹಿತಿ ರವಾನೆ

khushihost
ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕುರಿತು ಕೇಂದ್ರದಿಂದ ಮಾಹಿತಿ ರವಾನೆ

ಹೊಸದಿಲ್ಲಿ, ೧೪- ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕುರಿತಂತೆ ರಾಜ್ಯಗಳಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಶುಕ್ರವಾರ ಮಹತ್ವದ ಮಾಹಿತಿ ರವಾನೆ ಮಾಡಿದೆ.

ಕೆಲ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮತ್ತು ಡೀಲರ್ ಗಳು ಹೆಚ್ಚಿನ ಬ್ಯಾಟರಿ ಕೆಪ್ಯಾಸಿಟಿ ಹೊಂದಿರುವ ಹಾಗೂ ಪ್ರತಿ ಗಂಟೆಗೆ 40 ರಿಂದ 55 ಕಿ.ಮೀ. ವೇಗದಲ್ಲಿ ಚಲಿಸುವ ವಾಹನಗಳನ್ನು ಅನುಮತಿ, ವಿಮೆ ಹಾಗೂ ವಾಹನ ದೃಢೀಕರಣ ಇಲ್ಲದೇ ವಿತರಿಸುತ್ತಿದ್ದಾರೆ ಎಂದು ತಿಳಿಸಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಮೋಟಾರ್ ವೆಹಿಕಲ್ ಎಂದು ಪರಿಗಣಿಸದಿರಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಕೆಲವೊಂದು ನಿಯಮಗಳನ್ನು ರೂಪಿಸಿದ್ದು, ಇವುಗಳ ಪಾಲನೆ ಆಗುತ್ತಿಲ್ಲ ಎನ್ನಲಾಗಿದೆ.

ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ 0.25 kW ಸಾಮರ್ಥ್ಯದ 30 ನಿಮಿಷಗಳ ಪವರ್ ಹೊಂದಿದ್ದರೆ, ಇವುಗಳ ವೇಗ ಪ್ರತಿ ಗಂಟೆಗೆ 25 ಕಿ.ಮೀ ಒಳಗಿದ್ದರೆ ಹಾಗೂ ಬ್ಯಾಟರಿ ರಹಿತವಾಗಿ 60 ಕೆಜಿ ಒಳಗಿದ್ದರೆ ಮಾತ್ರ ಮೋಟಾರ್ ವೆಹಿಕಲ್ ಎಂದು ಪರಿಗಣಿಸಲಾಗುವುದಿಲ್ಲ.

Share This Article