ಕಮೀಷನ್ ಭಾರಕ್ಕೆ ಕುಸಿದ ನಿರ್ಮಾಣ ಹಂತದ ಕಾಮಗಾರಿ ಬೊಮ್ಮಾಯಿ ಅವರ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕ; ಕಾಂಗ್ರೆಸ್

khushihost
ಕಮೀಷನ್ ಭಾರಕ್ಕೆ ಕುಸಿದ ನಿರ್ಮಾಣ ಹಂತದ ಕಾಮಗಾರಿ ಬೊಮ್ಮಾಯಿ ಅವರ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕ; ಕಾಂಗ್ರೆಸ್

ಬೆಂಗಳೂರು: 40% ಕಮೀಷನ್ ಭಾರಕ್ಕೆ ನಿರ್ಮಾಣ ಹಂತದ ಕಾಮಗಾರಿಗಳು ಕುಸಿದು ಬೀಳುತ್ತಿವೆ. ಪೇಸಿಎಂ ಎಂದಾಕ್ಷಣ ಉರಿದುರಿದು ಬೀಳುವ ಬಸವರಾಜ ಬೊಮ್ಮಾಯಿ ಅವರೇ, ಇದನ್ನು ನಿಮ್ಮ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕವನ್ನಾಗಿ ಮಾಡಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಹೈಕಮಾಂಡಿಗೆ ಕಾಣಿಕೆ ಕೊಡುವುದು ಬಿಜೆಪಿಯಲಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದರು. ಆದರೆ ಅವರದೇ ಪಕ್ಷದ ಶಾಸಕರು “ದಿಲ್ಯಾಗ ರೊಕ್ಕಾ ಕೊಟ್ಟ ಬಂದಾರ ಬಿಜೆಪಿನ್ಯಾಗೆ” ಎಂದು ನೇರವಾಗಿ ಆರೋಪಿಸಿದ್ದಾರೆ, ಯತ್ನಾಳ ಹೇಳಿಕೆ ಬಗ್ಗೆ ಮಾತಾಡುವ ಧೈರ್ಯವಿದೆಯೇ? ರೊಕ್ಕಾ ಕೊಟ್ಟಿದ್ದನ್ನ ತನಿಖೆ ಮಾಡಲಿ ಎಂಬ ಯತ್ನಾಳ ಸವಾಲು ಸ್ವೀಕಸರಿಸುವ ದಮ್ಮು ತಾಕತ್ತು ಇದೆಯೇ ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

Share This Article