ಮಳೆಗೆ ದೂಧಸಾಗರದಲ್ಲಿ ಕೇಬಲ್ ಸೇತುವೆ ಕುಸಿತ : 40 ಜನರ ರಕ್ಷಣೆ 

khushihost
ಮಳೆಗೆ ದೂಧಸಾಗರದಲ್ಲಿ ಕೇಬಲ್ ಸೇತುವೆ ಕುಸಿತ : 40 ಜನರ ರಕ್ಷಣೆ 

ಬೆಳಗಾವಿ: ಕರ್ನಾಟಕ-ಗೋವಾ ಗಡಿಯಲ್ಲಿರುವ ಪ್ರಸಿದ್ಧ ದೂಧ​ಸಾಗರ​ ಜಲಪಾತದಲ್ಲಿ ಭಾರಿ ಮಳೆಗೆ ಕೇಬಲ್ ಸೇತುವೆ ಕುಸಿದು ಬಿದ್ದಿದ್ದು, 40ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಯಿತು.

ಶುಕ್ರವಾರ ಸಂಜೆ ಘಟನೆ ಈ ನಡೆದಿದ್ದು, ಗೋವಾ – ಕರ್ನಾಟಕ ಗಡಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಪಾತದ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ಸೇತುವೆ ಕುಸಿದಿದ್ದು, 40ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಕೂಡಲೇ ದೃಷ್ಟಿ ಲೈಫ್ ಸೇವರ್ಸ್ ಸಹಾಯದಿಂದ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ದೃಷ್ಟಿ ಲೈಫ್‌ ಸೇವರ್ಸ್‌ನ ಪಿಆರ್​ಒ ಮಾಹಿತಿ ನೀಡಿದೆ.

Share This Article