ಮಹಾರಾಷ್ಟ್ರದಲ್ಲಿ ಕನ್ನಡ ಭವನ ಮಾಡೇ ಮಾಡುತ್ತೇವೆ : ಸಚಿವ ಆರ್. ಅಶೋಕ

khushihost
ಮಹಾರಾಷ್ಟ್ರದಲ್ಲಿ ಕನ್ನಡ ಭವನ ಮಾಡೇ ಮಾಡುತ್ತೇವೆ : ಸಚಿವ ಆರ್. ಅಶೋಕ

ರಾಯಚೂರು : ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ವಿರೋಧ ವಿಚಾರವಾಗಿ ಸಚಿವ ಆರ‌. ಅಶೋಕ ಮಾತನಾಡಿ, ಕನ್ನಡ ಭವನ ಮಾಡೇ ಮಾಡುತ್ತೇವೆ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಸಚಿವ ಆರ್‌. ಆಶೋಕ ಮಾತನಾಡಿ, ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ವಿರೋಧವಿದೆ ಆದರೂ ಮಹಾರಾಷ್ಟ್ರದಲ್ಲಿ ಕನ್ನಡ ಭವನ ಮಾಡೇ ಮಾಡುತ್ತೇವೆ ಎಂದಿದ್ದಾರೆ.

ನಮ್ಮ ರಾಜ್ಯದಲ್ಲಿ ಶಿವಾಜಿ ಮೂರ್ತಿಗಳು ಇವೆ. ಉತ್ತರ ಭಾರತದವರಿಗೂ ನಾನು ಇಲ್ಲಿ ಜಾಗ ಕೊಟ್ಟಿದ್ದೇವೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಣ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Share This Article