ಸಮಸ್ಯೆಯಿದ್ದಲ್ಲಿ ಬಾರ್‌ಗೆ ಬನ್ನಿ ಎಂದು ಔಷಧಿ ಚೀಟಿಯಲ್ಲಿ ಬರೆದ ಡಾಕ್ಟರ್

khushihost
ಸಮಸ್ಯೆಯಿದ್ದಲ್ಲಿ ಬಾರ್‌ಗೆ ಬನ್ನಿ ಎಂದು ಔಷಧಿ ಚೀಟಿಯಲ್ಲಿ ಬರೆದ ಡಾಕ್ಟರ್

ತಿರುವನಂತಪುರಮ್, ೧೫- ಕೇರಳದ ತ್ರಿಶೂರ್ ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಕಾಲು ನೋವು ಎಂದು ಔಷಧಿಗಾಗಿ ವೈದ್ಯರ ಬಳಿ ಬಂದ ದಂಪತಿಗಳಿಗೆ ವೈದ್ಯ ನೀಡಿದ ಚೀಟಿ ಇದೀಗ ಭಾರೀ ವೈರಲ್‌ ಆಗಿದೆ.

ಕೇರಳದ ತ್ರಿಶೂರ್ ನಗರದ ಮಮ್ಮಿಯಾರ್‌ ನಿವಾಸಿ ಪ್ರಿಯಾ (44) ಮತ್ತು ಅಕೆಯ ಪತಿ ಅನಿಲ‌ಕುಮಾರ‌ ಕಳೆದ ಗುರುವಾರ ಅಲ್ಲಿನ ದಯಾ ಆಸ್ಪತ್ರೆಯಲ್ಲಿ ನಾಳೀಯ ಶಸ್ತ್ರಚಿಕಿತ್ಸೆ ವಿಭಾಗದ ಡಾ. ರಾಯ್‌ ವರ್ಘೀಸ್‌ ಎಂಬುವರರನ್ನು ಭೇಟಿ ಮಾಡಿದ್ದರು.
ಪ್ರಿಯಾ ಅವರು ವದಕ್ಕೇಕದ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದು, ಕಳೆದ ಎರಡು ವರ್ಷದಿಂಂದ ಅವರು ಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ರಾಯ್​ ವಾರ್ಘೀಸ್​ ಎಂಬುವರನ್ನು ಭೇಟಿ ಮಾಡಿದರು.

ಈ ವೇಳೆ ಡಾ. ​ವರ್ಘೀಸ್ ಅವರು​ ದಂಪತಿಗೆ ಎಕ್ಸ್​ರೇ ವರದಿ ತರುವಂತೆ ಹೇಳಿದರು. ಎಕ್ಸ್​ರೇ ವರದಿ ಪಡೆದು ಮರಳಿ ಡಾಕ್ಟರ್​ ಬಳಿ ಬಂದಾಗ ಎಕ್ಸ​ರೇ ನೋಡಿ ಡಾ. ​ವರ್ಘೀಸ್ ಅವರು​ ಮತ್ತೊಬ್ಬ ವೈದ್ಯರನ್ನು ಸಂಪರ್ಕಿಸುವಂತೆ ದಂಪತಿಗೆ ತಿಳಿಸಿದ್ದಾರೆ.

ಈ ವೇಳೆ ಪ್ರಿಯಾ ಪತಿ ಅನಿಲ ಕುಮಾರ, ಪತ್ನಿಗೆ ನಡೆಯಲು ಆಗುತ್ತಿಲ್ಲ. ತಾತ್ಕಾಲಿಕ ಪರಿಹಾರಕ್ಕಾಗಿ ಏನಾದರೂ ಔಷಧ ಬರೆದುಕೊಡಿ ಎಂದು ಡಾ. ವರ್ಘೀಸ್​ರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಬರೆದು ಕೊಟ್ಟ ಔಷಧ ಚೀಟಿ ನೋಡಿ ದಂಪತಿ ಶಾಕ್ ಆಗಿದ್ದಾರೆ .

ಡಾ. ವರ್ಘೀಸ್​ ಬರೆದುಕೊಟ್ಟ ಔಷಧ ಚೀಟಿಯಲ್ಲಿ ‘ಯಾವುದೇ ಬೆಡ್​ ರೆಸ್ಟ ಅವಶ್ಯಕತೆ​ ಇಲ್ಲ. (ಪತಿ) ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್‌ಗೆ ಭೇಟಿ ನೀಡಿ’ ಎಂದು ಬರೆಯಲಾಗಿದೆ.

ಈ ಸಂಬಂಧ ಅನಿಲ ಕುಮಾರ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದು, ದಯಾ ಆಸ್ಪತ್ರೆ ಡಾ. ವರ್ಘೀಸ್​ ಅವರನ್ನು ಕರ್ತವ್ಯದಿಂದಲೇ ವಜಾಗೊಳಿಸುವ ಮೂಲಕ ಡಾಕ್ಟರ್​ಗೆ ಶಾಕ್​ ನೀಡಿದ್ದಾರೆ.

Share This Article