ಕಾನ್ಸ​ಟೇಬಲ್ ಪರೀಕ್ಷೆ; ಬ್ಲೂಟೂತ್ ಬಳಸಿದ 49 ಪರೀಕ್ಷಾರ್ಥಿಗಳ ಬಂಧನ

khushihost
ಕಾನ್ಸ​ಟೇಬಲ್ ಪರೀಕ್ಷೆ; ಬ್ಲೂಟೂತ್ ಬಳಸಿದ 49 ಪರೀಕ್ಷಾರ್ಥಿಗಳ ಬಂಧನ

ಪಾಟ್ನಾ, ೧೭- ಬಿಹಾರ ಕಾನ್ಸ್​ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನ ಬಳಸಿದ ಆರೋಪದ ಮೇಲೆ 49 ಪರೀಕ್ಷಾರ್ಥಿಗಳನ್ನು ಬಿಹಾರ ಪೊಲೀಸರು ಬಂಧಿಸಿರುವ ಘಟನೆ ಪಾಟ್ನಾ ಮತ್ತು ಗಯಾ ಜಿಲ್ಲೆಗಳಲ್ಲಿ ನಡೆದಿದೆ.

ಗಯಾದಾದ್ಯಂತ 36 ಮತ್ತು ಪಾಟ್ನಾದಲ್ಲಿ 13 ಪರೀಕ್ಷಾರ್ಥಿಗಳು ಬ್ಲೂಟೂತ್ ಸಾಧನಗಳನ್ನು ಬಳಸಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್​ ಕಾನ್ಸ್​ಟೇಬಲ್​ ಪರೀಕ್ಷೆಯನ್ನು ಪಾಟ್ನಾದ ಅನೇಕ ಕೇಂದ್ರಗಳಲ್ಲಿ ನಡೆಸಲಾಯಿತು.

ಕಡಮ್ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಎನ್ ಆಂಗ್ಲೋ ಸಂಸ್ಕೃತ ಶಾಲೆಯಲ್ಲಿಯೂ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

ಈ ಕೇಂದ್ರದಲ್ಲಿ ಬ್ಲೂಟೂತ್ ಮೂಲಕ ನಕಲು ಮಾಡುತ್ತಿದ್ದ 13 ಅಭ್ಯರ್ಥಿಗಳನ್ನು ಬಂಧಿಸಲಾಗಿದ್ದು, ನಕಲು ಮಾಡಿ ಸಿಕ್ಕಿಬಿದ್ದ ಅಭ್ಯರ್ಥಿಗಳಲ್ಲಿ 11 ಯುವಕರು ಮತ್ತು ಇಬ್ಬರು ಹುಡುಗಿಯರು ಇರುವುದು ತಿಳಿದು ಬಂದಿದೆ.

Share This Article