ಕತ್ತು ಕೊಯ್ದು ವ್ಯಾಪಾರಿಯ ಬರ್ಬರ ಹತ್ಯೆ

khushihost
ಕತ್ತು ಕೊಯ್ದು ವ್ಯಾಪಾರಿಯ ಬರ್ಬರ ಹತ್ಯೆ

ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ಬಸ್ ನಿಲ್ದಾಣದ ಬಳಿ ಕತ್ತು ಕೊಯ್ದು ಮುಸ್ಲಿಮ ವ್ಯಾಪಾರಿಯ ಬರ್ಬರ ಹತ್ಯೆ ಮಾಡಲಾಗಿದೆ.

ಆಳಂದ ರೇವಣಸಿದ್ದೇಶ್ವರ ಕಾಲೋನಿ ನಿವಾಸಿ ಕರೀಂಲಾಲ ಬಾಗವಾನ್(25) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಜಗಳ ಬಿಡಿಸಲು ಹೋಗಿದ್ದ ಸಹೋದರ ಜುಬೇರಗೂ ಗಾಯಗಳಾಗಿವೆ. ಹಣ್ಣಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಹತ್ಯೆಯಾಗಿರುವ ಶಂಕೆ ಇದೆ. ಸಂಬಂಧಿಯಿಂದಲೇ ಕೊಲೆ ನಡೆದಿದೆ ಎನ್ನಲಾಗಿದೆ.

ಯುವತಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ನಂತರ ಇಬ್ಬರ ಕಡೆಯವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಜಗಳದ ವೇಳೆ ಚಾಕುವಿನಿಂದ ಇರಿಯಲಾಗಿದೆ ಎಂದೂ ಹೇಳಲಾಗಿದೆ.

ಆಳಂದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article