ರಾಜಧಾನಿಯಲ್ಲಿ ಗನ್‌ ತೋರಿಸಿ ಕಾರು ಕದ್ದ‌ ಬೆಚ್ಚಿಬೀಳಿಸುವ ವಿಡಿಯೋ

khushihost
ರಾಜಧಾನಿಯಲ್ಲಿ ಗನ್‌ ತೋರಿಸಿ ಕಾರು ಕದ್ದ‌ ಬೆಚ್ಚಿಬೀಳಿಸುವ ವಿಡಿಯೋ

ಹೊಸದಿಲ್ಲಿ, ೧- ಗನ್‌ ತೋರಿಸಿ ಬೆದರಿಸಿ ಕಾರನ್ನೇ ಹೈಜಾಕ್‌ ಮಾಡಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಅಕ್ಟೋಬರ್ 29 ರಂದು ಬೆಳಿಗ್ಗೆ 5:20ರ ಸುಮಾರಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ ಪ್ರಕರಣ ಇದು. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ನೈಋತ್ಯ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ 35 ವರ್ಷದ ವ್ಯಕ್ತಿಯೊಬ್ಬರ SUV ಕಾರನ್ನು ಮೂವರು ವ್ಯಕ್ತಿಗಳು ದೋಚಿದ್ದಾರೆ. ಕಾರು ಮಾಲೀಕರಿಗೆ ಗನ್‌ ಗುರಿಯಿಟ್ಟು ಬೆದರಿಸಿ ಎಸ್‌ಯುವಿ ಜೊತೆ ಪರಾರಿಯಾಗಿದ್ದಾರೆ.

ಎಸ್‌ಯುವಿ ಮಾಲೀಕರು ಕಾರನ್ನು ಪಾರ್ಕ‌ ಮಾಡುತ್ತಿದ್ದರು. ಆ ವೇಳೆ ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಆ ಪೈಕಿ ಇಬ್ಬರು ಬಂದೂಕು ಹಿಡಿದು ಕಾರ್‌ ಮಾಲೀಕರಿಗೆ ಬೆದರಿಸಲು ಆರಂಭಿಸಿದ್ದಾರೆ. ಬಂದೂಕು ನೋಡಿ ಭಯಭೀತನಾದ ಕಾರ್‌ ಮಾಲೀಕ ದರೋಡೆಕೋರರಿಗೆ ಕಾರಿನ ಕೀಲಿಯನ್ನು ಕೊಟ್ಟಿದ್ದಾನೆ. ನಂತರ ಮೂವರು ಎಸ್‌ಯುವಿ ಏರಿ ಅಲ್ಲಿಂದ ಪರಾರಿ‌ ಆಗಿದ್ದಾರೆ.

ಘಟನೆಗೆ ಇತರ ಮೂವರು ಸಾಕ್ಷಿಯಾಗಿದ್ದಾರೆ. ಈ ಕಾರ್‌ ಹೈಜಾಕಿಂಗ್‌ ಅನ್ನು ಊಬರ್‌ ಚಾಲಕನೊಬ್ಬ ಗಮನಿಸಿದ್ದ. ಆದರೆ ದುಷ್ಕರ್ಮಿಗಳ ಬಳಿ ಗನ್‌ ಇದ್ದಿದ್ದರಿಂದ ಯಾರೊಬ್ಬರೂ ಧ್ವನಿಯೆತ್ತಲಿಲ್ಲ. ಓರ್ವ ಯುವಕ ಮತ್ತು ಯುವತಿ ಕೂಡ ಈ ಘಟನೆ ನಡೆದ ವೇಳೆ ಸ್ಥಳದಲ್ಲಿದ್ದರು. ಅವರು ಕೂಡ ಗನ್‌ ನೋಡಿ ಭಯಭೀತರಾಗಿದ್ದಾರೆ.

Share This Article