ಪತಿ ಅಂತಿಮ ಯಾತ್ರೆ ನಡೆಯುತ್ತಿದ್ದಾಗಲೇ ಇಹಲೋಕ ತ್ಯಜಿಸಿದ ಪತ್ನಿ…!

khushihost
ಪತಿ ಅಂತಿಮ ಯಾತ್ರೆ ನಡೆಯುತ್ತಿದ್ದಾಗಲೇ ಇಹಲೋಕ ತ್ಯಜಿಸಿದ ಪತ್ನಿ…!

ಹುಬ್ಬಳ್ಳಿ, ೨- ಪತಿ ಅಂತಿಮ ಯಾತ್ರೆ ನಡೆಯುತ್ತಿರುವ ಸಂದರ್ಭದಲ್ಲೇ ಪತ್ನಿ ಸಹ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 91 ವರ್ಷದ ಶಿವಪುತ್ರಪ್ಪ ನೆಲಗುಡ್ಡ ಎಂಬವರು ನವಂಬರ್ 1ರಂದು ವಿಧಿವಶರಾಗಿದ್ದು, ಸಂಜೆ 4:00 ಗಂಟೆ ಸುಮಾರಿಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಅವರ ಪತ್ನಿ 80 ವರ್ಷದ ಬಸಮ್ಮ ನೆಲಗುಡ್ಡ ಅವರನ್ನು ಕಾರಿನಲ್ಲಿ ಮೆರವಣಿಗೆ ಹಿಂದೆಯೇ ಕರೆದುಕೊಂಡು ಹೋಗುತ್ತಿದ್ದ ವೇಳೆ ಬಸಮ್ಮ ಮೃತ ಪಟ್ಟಿದ್ದಾರೆ.

ಕೂಡಲೇ ಮೆರವಣಿಗೆಯನ್ನು ಮೊಟಕುಗೊಳಿಸಿ ಸಾವಿನಲ್ಲೂ ಒಂದಾದ ಪತಿ – ಪತ್ನಿಯ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.

Share This Article