ಸಾವಿನಲ್ಲೂ ಜೊತೆಯಾದ ದಂಪತಿ: ಪತ್ನಿ ಮೃತಪಟ್ಟ 3 ಗಂಟೆಯಲ್ಲೇ ಪತಿಯ ಸಾವು

khushihost
ಸಾವಿನಲ್ಲೂ ಜೊತೆಯಾದ ದಂಪತಿ: ಪತ್ನಿ ಮೃತಪಟ್ಟ 3 ಗಂಟೆಯಲ್ಲೇ ಪತಿಯ ಸಾವು

ಕೊಪ್ಪಳ: ಜೊತೆಯಾಗಿ ಜೀವನ ನಡೆಸಿದ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಅನಾರೋಗ್ಯದಿಂದಾಗಿ ಪತ್ನಿ ಹೊನ್ನಮ್ಮ ತಳವಾರ(56) ಮೃತಪಟ್ಟಿದ್ದಾರೆ. ಪತ್ನಿ ಮೃತಪಟ್ಟ ಮೂರು ಗಂಟೆಯಲ್ಲೇ ಪತಿ ಶಿವಪ್ಪ ತಳವಾರ(65) ಸಾವನ್ನಪ್ಪಿದ್ದಾರೆ.

ಪತ್ನಿ ನಿಧನದ ನಂತರ ಹೃದಯಾಘಾತದಿಂದ ಶಿವಪ್ಪ ತಳವಾರ ಕೊನೆಯುಸಿರೆಳೆದಿದ್ದಾರೆ. ಒಟ್ಟಿಗೆ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ದಂಪತಿ ಸಾವಿಗೆ ಕುಟುಂಬದವರು, ಬಂಧುಗಳು, ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

Share This Article