ತಹಶೀಲ್ದಾರ ಗಿರೀಶ ಸ್ವಾದಿ ನಾಪತ್ತೆ

khushihost
ತಹಶೀಲ್ದಾರ ಗಿರೀಶ ಸ್ವಾದಿ ನಾಪತ್ತೆ

ಹಾವೇರಿ: ಹಾವೇರಿ ತಹಶೀಲ್ದಾರ ಗಿರೀಶ ಸ್ವಾದಿ ನಾಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ.

ಕಳೆದ ಮೂರು ದಿನಗಳಿಂದ ಅವರು ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ಭಾಗ್ಯಶ್ರೀ ಅವರು ಹಾವೇರಿ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಕ್ಟೋಬರ 31ರ ರಾತ್ರಿ ನಂತರ ತಹಶೀಲ್ದಾರರು‌ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಕುಟುಂಬಸ್ಥರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

Share This Article