ಗರ್ಭಿಣಿಯಾದ ಬಾಲಕಿ: ಮದುವೆ ಮಾಡಿದ್ದ ಪೋಷಕರ ಮೇಲೆ ಪೋಕ್ಸೋ ಪ್ರಕರಣ ದಾಖಲು

khushihost
ಗರ್ಭಿಣಿಯಾದ ಬಾಲಕಿ: ಮದುವೆ ಮಾಡಿದ್ದ ಪೋಷಕರ ಮೇಲೆ ಪೋಕ್ಸೋ ಪ್ರಕರಣ ದಾಖಲು

ರಾಮನಗರ: ಬಾಲಕಿ ಮದುವೆಯಾಗಿದ್ದ ಯುವಕ ಸೇರಿದಂತೆ ಕುಟುಂಬದ ಐದು ಜನರು ಹಾಗೂ ಬಾಲಕಿಯ ಪೋಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಗ್ರಾಮದಲ್ಲಿ ಬಾಲಕಿ ಮದುವೆ ಮಾಡಿದ್ದು, ಆಕೆ ಗರ್ಭಿಣಿಯಾದ ನಂತರ ಕೇಸು ದಾಖಲಿಸಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಬಾಲಕಿ ತಪಾಸಣೆಗೆ ತೆರಳಿದ್ದ ಸಂದರ್ಭದಲ್ಲಿ ವಯಸ್ಸು ಗಮನಿಸಿದ ವೈದ್ಯರು ಕೂಡಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆರೋಪಿ ಮನೆ ಬಳಿ ತೆರಳಿದ ಕನಕಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿ ಆಕೆ ಗರ್ಭಿಣಿಯಾಗಿದ್ದು, ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಕಿ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮತ್ತು ಎರಡು ಕುಟುಂಬದವರು ನಾಪತ್ತೆಯಾಗಿದ್ದಾರೆ.

Share This Article