ಎರಡೂವರೆ ವರ್ಷಗಳ ಬಳಿಕ ದೇಶದಲ್ಲಿ ನಿನ್ನೆ ಕೋವಿಡ್ ಸಾವು ಸಂಭವಿಸಿಲ್ಲ

khushihost
ಎರಡೂವರೆ ವರ್ಷಗಳ ಬಳಿಕ ದೇಶದಲ್ಲಿ ನಿನ್ನೆ ಕೋವಿಡ್ ಸಾವು ಸಂಭವಿಸಿಲ್ಲ

ಹೊಸದಿಲ್ಲಿ : ಕೊರೋ ಎಂಬ ಮಹಾಮಾರಿ 2020 ರ ಮಾರ್ಚ್ ನಲ್ಲಿ ದೇಶದಲ್ಲಿ ಮೊದಲ ಕೋವಿಡ್ ಸಾವು ಸಂಭವಿಸಿದ್ದು, ಈ ವರೆಗೆ ಲೆಕ್ಕವಿಲ್ಲದಷ್ಟು ಮಂದಿ ಇದಕ್ಕೆ ಬಲಿಯಾಗಿದ್ದಾರೆ. ಸೋಂಕಿಗೆ ಕೆಲವೊಂದು ಕುಟುಂಬಗಳು ಸಂಪೂರ್ಣವಾಗಿ ನಿರ್ನಾಮವಾಗಿವೆ. ಪ್ರತಿಯೊಬ್ಬರು ಕುಟುಂಬದ ಸದಸ್ಯರಾಗಲಿ ಅಥವಾ ಸ್ನೇಹಿತರನ್ನಾಗಲಿ ಕಳೆದುಕೊಂಡಿದ್ದಾರೆ.

ಇದೀಗ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಅಲ್ಲದೇ ಮಂಗಳವಾರದಂದು ಯಾವುದೇ ಕೋವಿಡ್ ಸಾವಿನ ಪ್ರಕರಣಗಳು ನಡೆದಿಲ್ಲವಾದ ಕಾರಣ ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶೂನ್ಯ ಕೋವಿಡ್ ಸಾವು ದಾಖಲಾದಂತಾಗಿದೆ.

Share This Article