ಮಸೀದಿ ಪದಾಧಿಕಾರಿಗಳ ನೇಮಕ ವೇಳೆ ಹೊಡೆದಾಟ

khushihost
ಮಸೀದಿ ಪದಾಧಿಕಾರಿಗಳ ನೇಮಕ ವೇಳೆ ಹೊಡೆದಾಟ

ಕಾರವಾರ: ಮಸೀದಿವೊಂದರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವಿಚಾರಕ್ಕೆ ಮಾರಾಮಾರಿ ನಡೆದ ಘಟನೆ ಸಿದ್ದಾಪುರ ತಾಲೂಕಿನ ಅರೇಂದೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಸೀದಿಗೆ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ವೇಳೆ ಎರಡು ಗಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಬಡದಾಡಿಕೊಂಡಿದ್ದಾರೆ.

ಘಟನೆಯಲ್ಲಿ ಮೂರು ಮಂದಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಾಪುರ ಠಾಣೆಯಲ್ಲಿ 33 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Share This Article