ಹಿರೇಬಾಗೇವಾಡಿ ಘಾಟ್ ನಲ್ಲಿ ಸರಣಿ ಅಪಘಾತ ; ಮೂವರಿಗೆ ಗಂಭೀರ ಗಾಯ 

khushihost
ಹಿರೇಬಾಗೇವಾಡಿ ಘಾಟ್ ನಲ್ಲಿ ಸರಣಿ ಅಪಘಾತ ; ಮೂವರಿಗೆ ಗಂಭೀರ ಗಾಯ 

ಬೆಳಗಾವಿ : ಹಿರೇಬಾಗೇವಾಡಿ ಹೊರವಲಯದ ಘಾಟ್ ರಸ್ತೆಯಲ್ಲಿ ಲಾರಿ, ಟ್ರ್ಯಾಕ್ಟರ್ ಹಾಗೂ ಎರಡು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ತೀವ್ರ ಗಾಯಗೊಂಡಿದ್ದಾರೆ.

ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಲಾರಿಯು ಟ್ರ್ಯಾಕ್ಟರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಎರಡು ವಾಹನಗಳು ರಸ್ತೆ ಪಕ್ಕದ ಎರಡು ಬೈಕುಗಳಿಗೆ ಡಿಕ್ಕಿ ಹೊಡೆದವು.

ಒಂದಕ್ಕೂಂದು ಗುದ್ದಿದ ರಭಸಕ್ಕೆ ನಾಲ್ಕೂ ವಾಹನಗಳು ರಸ್ತೆ ಬದಿಗೆ ಉರುಳಿ ಬಿದ್ದವು. ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಮೂರು ತುಂಡಾಗಿದೆ. ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಒಬ್ಬ ಬೈಕ್ ಸವಾರ, ಟ್ರ್ಯಾಕ್ಟರ್ ಚಾಲಕ ಹಾಗೂ ಲಾರಿ ಚಾಲಕ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ರಸ್ತೆ ಬದಿಯ ತಗ್ಗಿನಲ್ಲಿ ಲಾರಿ ಮುಂಭಾಗ ಕೆಳಗೆ ಮಾಡಿ ಬಿದ್ದಿದ್ದರಿಂದ ಅದರೊಳಗೆ ಸಿಲುಕಿಕೊಂಡ ಚಾಲಕನನ್ನು ಹೊರತೆಗೆಯಲು ಊರಿನ ಜನ ಹಗ್ಗಗಳನ್ನು ತಂದು ಲಾರಿಯ ಮುಂಭಾಗದ ಸರಳು, ಗಾಜು, ಕಟ್ಟಿಗೆ ಪಾರ್ಟ್ ಗಳನ್ನು ಕಿತ್ತು ವ್ಯಕ್ತಿಯನ್ನು ಹೊರತೆಗೆದರು.

Share This Article