ಹೆದ್ದಾರಿಗಳನ್ನು ತಡೆದು ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆ; ಜನ ಕಂಗಾಲು 

khushihost
ಹೆದ್ದಾರಿಗಳನ್ನು ತಡೆದು ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆ; ಜನ ಕಂಗಾಲು 

ಬಾಗಲಕೋಟ : ಕಬ್ಬು ಬೆಳೆಗೆ ನಿಗದಿತ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಇನ್ನಷ್ಟು ತೀವ್ರಗೊಂಡಿದೆ. ಬಾಗಲಕೋಟದ ಗದ್ದನಕೇರಿ ಕ್ರಾಸ್‌ನ್ನು ಬಂದ್‌ ಮಾಡಿ ರೈತರು ಪ್ರತಿಭಟನೆ ಮಾಡಿದರು.

ಗದ್ದನಕೇರಿ ಕ್ರಾಸ್ ಬಂದ್ ಮಾಡಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿತ್ತು. ಅದರಂತೆ ಹುಬ್ಬಳ್ಳಿ- ಸೊಲ್ಲಾಪುರ, ಬೆಳಗಾವಿ- ರಾಯಚೂರು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರವೇ ಇಲ್ಲದಾಗಿತ್ತು.

ಬೀಳಗಿ, ಮುಧೋಳ ಭಾಗದ ರೈತರು ಬಂದು ಪ್ರತಿಭಟನೆ ನಡೆಸುತ್ತಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರವೇ ಸ್ತಬ್ಧಗೊಂಡಿದೆ.

ಅಲ್ಲದೇ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಅನಗವಾಡಿ ಸೇತುವೆಯನ್ನು ಬಂದ್‌ ಮಾಡಲಾಗಿತ್ತು. ಇದರಿಂದಾಗಿ ಸೇತುವೆಯಲ್ಲಿ ನೂರಾರು ವಾಹನಗಳು, ರಸ್ತೆಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತವು. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Share This Article