ಮತದಾರರ ಮಾಹಿತಿ ಕಳವು: ಚೆಲುಮೆ ಸಂಸ್ಥೆಯ ಅನುಮತಿ ರದ್ದು

khushihost
ಮತದಾರರ ಮಾಹಿತಿ ಕಳವು: ಚೆಲುಮೆ ಸಂಸ್ಥೆಯ ಅನುಮತಿ ರದ್ದು

ಬೆಂಗಳೂರು: ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹ ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಇದೀಗ ಚೆಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದು ಮಾಡಿದೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಚೆಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು.ಆದರೆ ಚೆಲುಮೆ ಸಂಸ್ಥೆ ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿ ದುರ್ಬಳಕೆ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪ ಮಾಡಿತ್ತು.

ಅಲ್ಲದೇ ಕಾಂಗ್ರೆಸ್ ಕೂಡ ರಾಜ್ಯ ಸರ್ಕಾರ ಹೊಂಬಾಳೆ ಹಾಗೂ ಚೆಲುಮೆ ಎಂಬ ಎರಡು ಖಾಸಗಿ ಸಂಸ್ಥೆಗಳ ಮೂಲಕ ಮತದಾರರ ಡೇಟಾ ಕಳ್ಳತನಕ್ಕೆ ಅನುಮತಿ ನೀಡಿದ್ದು, ಅಕ್ರಮದ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿತ್ತು.
ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ನಿನ್ನೆಯೇ ರದ್ದು ಪಡಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Share This Article