ಶಾಸಕರ ಖರೀದಿ ಪ್ರಕರಣ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷಗೆ ಸಮನ್ಸ

khushihost
ಶಾಸಕರ ಖರೀದಿ ಪ್ರಕರಣ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷಗೆ ಸಮನ್ಸ

ಹೊಸದಿಲ್ಲಿ, ೧೯- ತಮ್ಮ ರಾಜ್ಯದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕರ ಖರೀದಿಗೆ ಯತ್ನಿಸಿದ ಆರೋಪದ ಮೇಲೆ ನವೆಂಬರ್ 21ರೊಳಗೆ ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಪೊಲೀಸರು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ‌ಗೆ ಸಮನ್ಸ ಜಾರಿಗೊಳಿಸಿದ್ದಾರೆ. ವಿಚಾರಣೆಗೆ ತಪ್ಪಿದ್ದಲ್ಲಿ ಬಂಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೋಟಿಸ್‌ನಲ್ಲಿ ನಮೂದಿಸಿದ್ದಾರೆ.

ತೆಲಂಗಾಣ ಹೈಕೋರ್ಟ ಶಾಸಕರ ಖರೀದಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಬಿಜೆಪಿಯ ಮನವಿಯನ್ನು ತಿರಸ್ಕರಿಸಿದ ನಂತರ ಮತ್ತು ಪ್ರಕರಣದ ತನಿಖೆಯನ್ನು ಎಸ್‌ಐಟಿ ಸ್ವತಂತ್ರವಾಗಿ ಕೈಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ಪ್ರಕರಣದ ತನಿಖೆಯನ್ನು ನ್ಯಾಯಾಧೀಶರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

ವಿಶೇಷವೆಂದರೆ, ತೆಲಂಗಾಣ ಸರ್ಕಾರವು ಪ್ರಕರಣದ ತನಿಖೆಗಾಗಿ ನವೆಂಬರ್ 9 ರಂದು ಎಸ್‌ಐಟಿ ಅನ್ನು ರಚಿಸಿತು. ಎಸ್‌ಐಟಿ ಆರು ಪೊಲೀಸ್ ಅಧಿಕಾರಿಗಳನ್ನು ಹೊಂದಿದ್ದು, ಹೈದರಾಬಾದ ಪೊಲೀಸ್ ಕಮಿಷನರ್ ಮುಖ್ಯಸ್ಥರಾಗಿದ್ದಾರೆ.

ಅಕ್ಟೋಬರ 26 ರ ರಾತ್ರಿ ಹೈದರಾಬಾದ ಬಳಿಯ ಮೊಯಿನಾಬಾದ‌ನಲ್ಲಿರುವ ಫಾರ್ಮ ‌ಹೌಸ್‌ ನಲ್ಲಿ ನಾಲ್ವರು ಟಿಆರ್‌ಎಸ್ ಶಾಸಕರಿಗೆ ಹಣದ ಆಮಿಷ ಒಡ್ಡಲು ಪ್ರಯತ್ನಿಸುತ್ತಿದ್ದಾಗ ಸೈಬರಾಬಾದ ಪೊಲೀಸರು ಬಂಧಿಸಿದ್ದರು.

ಆರೋಪಿಗಳು ತನಗೆ 100 ಕೋಟಿ ಮತ್ತು ಇತರ ಮೂವರಿಗೆ ತಲಾ 50 ಕೋಟಿ ರೂ.ಗಳನ್ನು ಬೇಡಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕರೊಬ್ಬರಾದ ಪೈಲಟ್ ರೋಹಿತ ರೆಡ್ಡಿ ನೀಡಿದ ಸುಳಿವಿನ ಮೇರೆಗೆ ಸೈಬರಾಬಾದ ಪೊಲೀಸರು ದಾಳಿ ನಡೆಸಿದ್ದರು.
ಹೈದರಾಬಾದ ಪೊಲೀಸ್ ಕಮಿಷನರ್ ಸಿ.ವಿ. ಆನಂದ್ ನೇತೃತ್ವದ 7 ಸದಸ್ಯರ ಎಸ್‌ಐಟಿಯ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿರುವ ಸಹಾಯಕ ಪೊಲೀಸ್ ಕಮಿಷನರ್ ಬಿ. ಗಂಗಾಧರ ಅವರು ನವೆಂಬರ 16 ರಂದು ಬಿಜೆಪಿ ನಾಯಕನಿಗೆ ಅವರ ಬೆಂಗಳೂರಿನ ನಿವಾಸದಲ್ಲಿ ನೋಟಿಸ್ ನೀಡಿದ್ದರು.

ಟಿಆರ್‌ಎಸ್ ಶಾಸಕರ ಖರೀದಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ನವೆಂಬರ್ 21 ರಂದು ಬೆಳಿಗ್ಗೆ 10.30 ಕ್ಕೆ ಹೈದರಾಬಾದ‌ನ ತೆಲಂಗಾಣ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ನಲ್ಲಿ ಸಂತೋಷ‌ಗೆ ತಿಳಿಸಿದೆ.

ಈ ನೋಟೀಸ್‌ನ ನಿಯಮಗಳಿಗೆ ಹಾಜರಾಗಲು ವಿಫಲವಾದರೆ ಸಿಆರ್ ಪಿಸಿ ಯ ಸೆಕ್ಷನ್ ಅಡಿಯಲ್ಲಿ ಬಂಧನಕ್ಕೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ನೋಟಿಸ್ ನೀಡಲಾಗಿದೆ.

ದಕ್ಷಿಣ ಭಾರತದ ಕರ್ನಾಟಕದಲ್ಲಿ ಮಾಡಿದಂತೆ
‘ಆಪರೇಷನ್ ಕಮಲ’ ದ ಮೂಲಕ ದಕ್ಷಿಣದ ಮತ್ತೊಂದು ರಾಜ್ಯ ತೆಲಂಗಾಣ ‘ವಶ ಪಡಿಸಿಕೊಳ್ಳುವ’ ಬಿಜೆಪಿಯ ಯತ್ನದ ವಿಚಾರಣೆಯನ್ನು ನ್ಯಾಯಾಧೀಶರ ಮೇಲ್ವೀಚಾರಣೆಯಲ್ಲಿ ತೆಲಂಗಾಣ ಪೊಲೀಸರು ನಡೆಸಬಹುದು ಎಂದು ಹೈಕೋರ್ಟ ಹೇಳಿದ ನಂತರ ಕರ್ನಾಟಕದ ಸಂತೋಷಗೆ ನೋಟೀಸ್ ನೀಡಲಾಗಿದೆ.

ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಟಿಆರ್‌ಎಸ್‌ ಸರಕಾರವನ್ನು ‘ಆಪರೇಷನ್ ಕಮಲ’ ದ ಮೂಲಕ ಬಿಳಿಸಿ ಆ ಪಕ್ಷದ ಶಾಸಕರನ್ನು ಖರೀದಿಸಿ ದಕ್ಷಿಣದ ಎರಡನೇ ರಾಜ್ಯದಲ್ಲಿ ಕಮಲವರಳಿಸಲು ಯೋಜನೆ ರೂಪಿಸಿ ಪ್ರತಿ ಶಾಸಕರಿಗೆ 100 ಕೋಟಿ ರೂಪಾಯಿ ಆಮಿಷವೊಡ್ಡಿತ್ತು. ಇದಕ್ಕಾಗಿ ಬಿಜೆಪಿ ಬಳಸಿಕೊಂಡ
ಮೂವರನ್ನು ಅಕ್ಟೋಬರ್ 26 ರ ರಾತ್ರಿ ಹೈದರಾಬಾದ ಬಳಿಯ ಮೊಯಿನಾಬಾದ್‌ನಲ್ಲಿರುವ ಫಾರ್ಮ‌ ಹೌಸ್‌ನಿಂದ ಪೊಲೀಸರು ಬಂಧಿಸಿದ್ದರು. ಸದ್ಯ ಅವರು ಈಗ ಜಾಮೀನು ಪಡೆದಿದ್ದಾರೆ.

ಟಿಎಂಸಿ ಶಾಸಕರಲ್ಲಿ ಒಬ್ಬರಾದ ರೋಹಿತ ರೆಡ್ಡಿ ನೀಡಿದ ಸುಳಿವಿನ ಮೇರೆಗೆ ಸೈಬರಾಬಾದ ಪೊಲೀಸರು ದಾಳಿ ನಡೆಸಿದ್ದಾರೆ. ಶಾಸಕ ರೆಡ್ಡಿ ಆ ಮೂವರೂ ತಾವು ಬಿಜೆಪಿಗೆ ಬಂದರೆ ತಮಗೆ 100 ಕೋಟಿ ಹಾಗೂ ತಮ್ಮೊಂದಿಗೆ ಬರುವ ಇತರ ಮೂವರಿಗೆ ತಲಾ 50 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು ಎಂದು ಮಾಹಿತಿ ನೀಡಿದ್ದರು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಟಿಆರ್‌ಎಸ್ ಪಕ್ಷದ ನಾಲ್ವರು ಶಾಸಕರನ್ನು ಖರೀದಿಸುವ ಪ್ರಯತ್ನ ವಿಫಲಗೊಳಿಸಲಾಗಿದೆ ಎಂದಿರುವ ಕೆಸಿಆರ್, “ಬಿಜೆಪಿಗೆ ಸಂಬಂಧಿಸಿದ ಒಂದು ಗಂಟೆಗೂ ಹೆಚ್ಚಿನ ಹಿಡನ್ ಕ್ಯಾಮೆರಾ ಫೂಟೇಜ್ ಅನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಗೃಹ ಮಂತ್ರಿ ಅಮಿತ ಶಾ ಮತ್ತು ಬಿ.ಎಲ್ ಸಂತೋಷ ಹೆಸರು ಕೇಳಿಬಂದಿತ್ತು. ರಾಷ್ಟ್ರೀಯ ತಂಡ ಆಪರೇಷನ್ ಕಮಲ ಮಾಡುತ್ತದೆ; ಅದರಲ್ಲಿ ಸಂತೋಷ್, ಅಮಿತ್‌ ಶಾ ಮತ್ತು ಜೆಪಿ ನಡ್ಡಾ ಇದ್ದಾರೆ ಎಂದು ಬಿಜೆಪಿ ಬೆಂಬಲಿಗರು ಹೇಳಿದ್ದರು.

Share This Article