ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ : ಬೈಕ್ ಸವಾರ ಸಾವು 

khushihost
ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ : ಬೈಕ್ ಸವಾರ ಸಾವು 

ವಿಜಯಪುರ : ಬೈಕ್‌ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದದ್ದರಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಕ್ರಾಸ್ ಬಳಿ ನಡೆದಿದೆ.

ಗುರುರಾಜ ಶಿರಶ್ಯಾಡ (32) ಮೃತ ಬೈಕ್ ಸವಾರ. ಮೃತ ಗುರುರಾಜ​ ಬೈಕ್‌ನಲ್ಲಿ ಹೋಗುವಾಗ ಹಿಂಬದಿಯಿಂದ ಬಂದ ಕ್ಯಾಂಟರ್ ವಾಹನ​ ಡಿಕ್ಕಿಹೊಡೆದಿದ್ದು,ಬೈಕ್​ ಸವಾರನ ತಲೆ ಮೇಲೆ ಕ್ಯಾಂಟರ್​ ಚಕ್ರ ಹರಿದು ಸ್ಥಳದಲ್ಲೇ ದಾರುಣ ಸಾವು  ಕಂಡಿದ್ದಾನೆ.

ಬಳಿಕ ಕ್ಯಾಂಟರ್​ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.‌ ಈ ಅಪಘಾತದ ದೃಶ್ಯ ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಝಳಕಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article