ಪಡಿತರ ಚೀಟಿಯಲ್ಲಿ ಕುತ್ತಾ ಎಂದು ಹೆಸರು ನಮೂದು : ಅಧಿಕಾರಿ ಮುಂದೆ ನಾಯಿಯಂತೆ ಬೊಗಳಿದ ವ್ಯಕ್ತಿ 

khushihost
ಪಡಿತರ ಚೀಟಿಯಲ್ಲಿ ಕುತ್ತಾ ಎಂದು ಹೆಸರು ನಮೂದು : ಅಧಿಕಾರಿ ಮುಂದೆ ನಾಯಿಯಂತೆ ಬೊಗಳಿದ ವ್ಯಕ್ತಿ 

ಕೋಲಕತ್ತಾ: ಪಡಿತರ ಚೀಟಿಯಲ್ಲಿ ತನ್ನ ಹೆಸರಿನ ಬದಲಾಗಿ ಕುತ್ತಾ ಎಂದು ತಪ್ಪಾಗಿ ಮುದ್ರಣ ಮಾಡಿದ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಅಧಿಕಾರಿಯ ಮುಂದೆ ನಾಯಿಯಂತೆ ಬೊಗಳಿದ ವಿಡಿಯೋ ವೈರಲ್‌ ಆಗುತ್ತಿದೆ.

ಶ್ರೀಕಾಂತಿ ದತ್ತಾ ಎಂಬ ವ್ಯಕ್ತಿ, ಸರ್ಕಾರಿ ಅಧಿಕಾರಿಯ ಮುಂದೆ ನಾಯಿಯಂತೆ ಬೊಗಳುತ್ತಾ ಅವರ ದೂರನ್ನು ಗಮನಿಸುವಂತೆ ಕೇಳುತ್ತಿರುವುದನ್ನು ನೋಡಬಹುದು.

ಬಂಕೂರಿನವರಾದ ಶ್ರೀಕಂಠಿ ದತ್ತಾ ಅವರ ಪಡಿತರ ಚೀಟಿಯಲ್ಲಿ ತಮ್ಮ ಹೆಸರನ್ನು ಒಂದಲ್ಲ ಮೂರು ಬಾರಿ ತಪ್ಪಾಗಿ ಮುದ್ರಿಸಲಾಗಿದೆ. ಮೂರನೇ ಬಾರಿ ಅವರ ಪಡಿತರ ಚೀಟಿಯಲ್ಲಿ ಶ್ರೀಕಂಠಿ ಕುತ್ತಾ ಎಂದು ಬರೆಯಲಾಗಿದೆ ಎಂದು ಆರೋಪಿಸಿದ್ದಾರೆ. ಈ ತಪ್ಪಿನಿಂದ ಮಾನಸಿಕವಾಗಿ ನೊಂದಿದ್ದೇನೆ ಎಂದು ದತ್ತಾ ಹೇಳಿದ್ದಾರೆ.

Share This Article